Job Description: * ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್ಪುರ್ ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಉಷ್ಣವಲಯದ ಚಂಡಮಾರುತಗಳ ಅಥವಾ ಆರಂಭಿಕ ಸೈಕ್ಲೋನ್ ಪತ್ತೆ ಹಚ್ಚುವ ತಂತ್ರವನ್ನು ಅಭಿವೃದ್ಧಿಪಡಿಸಿದೆ. * ಐಐಟಿ ಖರಗ್ಪುರ್ ಎಡ್ಡಿ ತಂತ್ರವನ್ನು ಬಳಸಿಕೊಂಡು ಆರಂಭಿಕ ಸೈಕ್ಲೋನ್ ಪತ್ತೆ ಹಚ್ಚುವ ತಂತ್ರವನ್ನು ಅಭಿವೃದ್ಧಿಪಡಿಸಿದೆ, ಈ ತಂತ್ರಜ್ಞಾನವು ಉಷ್ಣವಲಯದ ಸೈಕ್ಲೋನ್ ಮುಂಚಿತವಾಗಿ ಪತ್ತೆ ಮಾಡುವ ಅವಧಿಯನ್ನು ತನಿಖೆ ಮಾಡಲು ಸಹಾಯ ಮಾಡುತ್ತದೆ, ಈ ತಂತ್ರ ಜ್ಞಾನವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹವಾಮಾನ ಬದಲಾವಣೆ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. * ಪ್ರಸ್ತುತ ಈ ತಂತ್ರಜ್ಞಾನವನ್ನು ವಾಯುಮಂಡಲದ ಪೂರ್ವ-ಸೈಕ್ಲೋನಿಕ್ ಆರಂಭಿಕ ಹಂತವನ್ನು ಗುರುತಿಸುವ ಉದ್ದೇಶ ಮತ್ತು ಪ್ರಾದೇಶಿಕ-ತಾತ್ಕಾಲಿಕ ವಿಕಾಸವನ್ನು ಪತ್ತೆ ಹಚ್ಚುವ ಸಲುವಾಗಿ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ ಸೈಕ್ಲೋನ್'ಗಳನ್ನೂ ಮೊದಲೇ ಕಂಡುಹಿಡಿಯಲು ದೂರಸ್ಥ ಸಂವೇದನಾ ತಂತ್ರಗಳನ್ನು ಬಳಕೆ ಮಾಡಲಾಗುತ್ತಿತ್ತು, ಪ್ರಸ್ತುತ ಐಐಟಿ ಖರಗ್ಪುರ್'ನ ಈ ಹೊಸ ತಂತ್ರವು ಸೈಕ್ಲೋನಿಕ್ ಎಡ್ಡಿಗಳನ್ನು ಆಧರಿಸಿ ಆರಂಭಿಕ ಹಂತದಲ್ಲಿ ಚಂಡಮಾರುತಗಳ ಮುನ್ಸೂಚನೆಯನ್ನು ಕಂಡುಹಿಡಿಯಲು ಬಳಸಬಹುದಾಗಿದೆ ಎಂದು ತಿಳಿಸಲಾಗಿದೆ. * ಮಾನ್ಸೂನ್ ನಂತರದ 4 ತೀವ್ರ ಚಂಡಮಾರುತಗಳು 2013ರಲ್ಲಿ ಫೈಲಿನ್, ವರ್ದಾ ಮತ್ತು ಮಡಿ 2018ರಲ್ಲಿ ಗಜಾ ಇದರ ಜೊತೆಗೆ 2 ಮಾನ್ಸೂನ್'ನ ಪೂರ್ವ ಚಂಡಮಾರುತಗಳು 2017ರಲ್ಲಿ ಮೊರಾ ಹಾಗೂ 2009ರಲ್ಲಿ ಐಲಾ ಪ್ರಕರಣಗಳನ್ನು ಸಂಶೋಧಕರು ನಡೆಸಿದ್ದಾರೆ, ಈ ತಂತ್ರವು ಚಂಡಮಾರುತಗಳಿಗೆ ಕನಿಷ್ಠ 4 ದಿನಗಳ ಪ್ರಮುಖ ಸಮಯದೊಂದಿಗೆ ಕಂಡುಹಿಡಿಯಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.