Job Description: * ಇತ್ತೀಚಿಗೆ ಲಕ್ಷದ್ವೀಪ ಆಡಳಿತವು ಮೀನುಗಾರಿಕಾ ದೋಣಿಗಳಲ್ಲಿ ಸರಕಾರಿ ಸಿಬ್ಬಂದಿಗಳನ್ನೂ ನಿಯೋಜಿಣೆ ಮಾಡಲಾಗುವದು ಎಂದು ಆದೇಶವನ್ನು ಹೊರಡಿಸಿತ್ತು, ಇದೀಗ ಅಲ್ಲಿನ ನೌಕರರು ಮತ್ತು ಸ್ಥಳೀಯರಿಂದ ವ್ಯಾಪಕ ಪ್ರತಿಭಟನೆ ಕಾರಣದಿಂದಾಗಿ ಮೀನುಗಾರಿಕಾ ದೋಣಿಗಳಲ್ಲಿ ಸರಕಾರಿ ಅಧಿಕಾರಿಗಳನ್ನು ನಿಯೋಜಿಸುವ ಆದೇಶವನ್ನು ಹಿಂದಕ್ಕೆ ಹಾಗೂ ಇದರ ಜೊತೆಗೆ ಹಡಗುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಲಕ್ಷದ್ವೀಪ ಆಡಳಿತ ತಿಳಿಸಿದೆ. * ಈ ಹಿಂದೆ ಲಕ್ಷದ್ವೀಪ ಆಡಳಿತಾಧಿಕಾರಿಯಾಗಿರುವ ಪ್ರಫುಲ್ ಖೋಡಾ ಪಟೇಲ್ ಅವರು ಪ್ರಸ್ತಾವಣೆಯ ಸುಧಾರಣೆಗಳ ವಿರುದ್ಧ ದ್ವೀಪವಾಸಿಗಳು (ಸ್ಥಳೀಯರು) ಪ್ರತಿಭಟನೆ ಆರಂಭಿಸಿರುವಾಗಲೇ ಗುಪ್ತಚರ ಮಾಹಿತಿ ಸಂಗ್ರಹಣೆಗಾಗಿ ಸ್ಥಳೀಯ ಮೀನುಗಾರಿಕಾ ದೋಣಿಗಳಲ್ಲಿ ಸರಕಾರಿ ಅಧಿಕಾರಿಗಳನ್ನು ನಿಯೋಜಿಸಲಗುವದು ಎಂದು ಲಕ್ಷದ್ವೀಪ ಆಡಳಿತ ಆದೇಶ ಹೊರಡಿಸಿತ್ತು ಇದೀಗ ಆ ಆದೇಶವನ್ನು ಹಿಂಪಡೆಯಲಾಗಿದೆ.