Job Description: * ಇತ್ತೀಚಿಗೆ ಲಕ್ಷದ್ವೀಪದಲ್ಲಿನ ಆಡಳಿತ ಭಾರಿ ವಿರೋಧದ ನಡುವೆಯೂ ಹೊಸ ನಿರ್ಧಾರಗಳನ್ನು ಹಮ್ಮಿಕೊಳ್ಳುತಿದ್ದೆ, ಅದುವೇ ಮೀನುಗಾರಿಕೆ ಬೋಟ್'ಗಳಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡುವ ಹೊಸ ಕಾನೂನುಗಳನ್ನು ಜಾರಿಗೆತರಲು ಮುಂದಾಗುತಿದೆ. * ಪ್ರಸ್ತುತ ಲಕ್ಷ ದ್ವೀಪದಲ್ಲಿನ ಸ್ಥಳೀಯರು ಇದಕ್ಕೆ ಅತಿಯಾದ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. * ಪ್ರಸ್ತುತ ಮೀನುಗಾರಿಕೆ ಬೋಟ್'ಗಳಲ್ಲಿ ಜವಾಬ್ದಾರಿಯುತ ಸರ್ಕಾರಿ ನೌಕರರನ್ನು ನೇಮಕ ಮಾಡುವ ಹೊಸ ಕಾನೂನು ಮತ್ತು ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದ್ದೆ, ಈ ನಿರ್ಧಾರಗಳಿಂದ ಗುಪ್ತಚರ ಮಾಹಿತಿ ಸಂಗ್ರಹ ಮತ್ತು ಭದ್ರತಾ ಮೇಲ್ವಿಚಾರಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಹೊಸ ಆದೇಶ ಜಾರಿಗೆ ತರಲಾಗುತ್ತಿದ್ದೆ ಎಂದು ತಿಳಿಸಲಾಗಿದೆ. * ಲಕ್ಷದ್ವೀಪದ ಆಡಳಿತವು ಜೂ.04ರಂದು, ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ, ಮತ್ತು ಅಲ್ಲಿನ ತೆಂಗಿನ ಚಿಪ್ಪು, ಮರದ ಎಲೆ, ಎಳನೀರಿನ ಚಿಪ್ಪುಗಳನ್ನು ಸಾರ್ವಜನಿಕ ವಲಯಗಳಿಂದ ಹೊರ ತೆಗೆದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಸ್ಥಳೀಯ ಭದ್ರತೆ ಕಾಪಾಡಲು ಜೊತೆಗೆ ಬಿಗಿಗೊಳಿಸಲು ಸ್ಥಳೀಯ ಮೀನುಗಾರಿಕೆ ಬೋಟ್ ಮತ್ತು ಸಿಬ್ಬಂದಿಗಳ ಮೇಲೆ ಭದ್ರತಾ ದೃಷ್ಟಿಯಿಂದ ನಿಗಾವಹಿಸುವದು ಮತ್ತು ದ್ವೀಪಕ್ಕೆ ಭೇಟಿ ನೀಡುವ ಪ್ರಯಾಣಿಕರ ಮೇಲೆ ನಿಗಾವಹಿಸಲು ಈ ಹೊಸ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.