Job Description: * ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 111 ನಗರಗಳ ಪಟ್ಟಿಯ "ಈಸ್ ಆಫ್ ಲಿವಿಂಗ್ ಇಂಡೆಕ್ಸ್ -2020 (Ease of Living Index 2020)"ನ್ನು ಬಿಡುಗಡೆ ಮಾಡಿದೆ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿರುವ ಹರ್ದೀಪ್ ಸಿಂಗ್ ಪುರಿ ಅವರು ಇದನ್ನು ಇತ್ತೀಚಿಗೆ ಬಿಡುಗಡೆ ಮಾಡಿದರು. * ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ 'ಈಸಿ ಆಫ್ ಲಿವಿಂಗ್ ಇಂಡೆಕ್ಸ್'ನಲ್ಲಿ (Ease of Living Index 2020)ರ ಈ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರವು ಅಗ್ರಸ್ಥಾನ ಪಡೆದಿದೆ. * ಪ್ರಸ್ತುತ ಭಾರತ ದೇಶದಲ್ಲಿ ಜೀವನ ನಡೆಸಲು ಕರ್ನಾಟಕದ ರಾಜ್ಯದ ರಾಜಧಾನಿ ಬೆಂಗಳೂರು ಉತ್ತಮವಾಗಿದೆ ಎಂದು ತಿಳಿಸಿದೆ, ಪ್ರಸ್ತುತ 1 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ವಾಸಿಸಲು ದೇಶದ ಅತ್ಯುತ್ತಮ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. * ಬೆಂಗಳೂರು ಪ್ರಥಮ ಸ್ಥಾನ, ಪುಣೆಗೆ 2ನೇ ಸ್ಥಾನ, ಅಹಮದಾಬಾದ್ 3ನೇ ಸ್ಥಾನ, ಚೆನ್ನೈ 4ನೇ ಸ್ಥಾನ, ಹಾಗೂ ರಾಷ್ಟ್ರ ರಾಜಧಾನಿ ದೆಹಲಿಗೆ 13ನೇ ಸ್ಥಾನ ಪಡೆದಿದೆ. * ಅಲ್ಲದೆ 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ವಾಸಿಸುತ್ತಿರುವ ನಗರಗಳಲ್ಲಿ ಶಿಮ್ಲಾ ಅಗ್ರಸ್ಥಾನದಲ್ಲಿದೆ, ಆದರೆ ಕರ್ನಾಟಕದ ರಾಜ್ಯದ ದಾವಣಗೆರೆ ನಗರವು 9ನೇ ಸ್ಥಾನ ಪಡೆದಿದೆ.