Job Description: * ಕೇಂದ್ರ ರಕ್ಷಣಾ ಇಲಾಖೆ ದೇಶೀಯವಾಗಿ 6 ಅತ್ಯಾಧುನಿಕ ಜಲಂತರ್ಗಾಮಿಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆಗೆ 43,000 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. * ಪ್ರಸ್ತುತ ಚೀನಾ ರಾಷ್ಟ್ರವು ತನ್ನ ನೌಕಾ ಬಲವನ್ನು ಕ್ರಮೇಣ ಹೆಚ್ಚಿಸುತ್ತಿರುವ ಹಿನ್ನಲೆಯಿಂದಾಗಿ, ಭಾರತೀಯ ಕೇಂದ್ರ ರಕ್ಷಣಾ ಸ್ವಾದೀನ ಸಮಿತಿಯು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಿತು ಆ ಸಭೆಯಲ್ಲಿ ಸಬ್ಮರಿನ್ ತಯಾರಿಸಲು ತೀರ್ಮಾನ ತೆಗೆದುಕೊಂಡಿದೆ. * ಕೇಂದ್ರ ರಕ್ಷಣಾ ಇಲಾಖೆಯ ಈ ತೀರ್ಮಾನವು ನೌಕಾಪಡೆಯ ಬೃಹತ್ ಯೋಜನೆಯಾಗಿದೆ ಅತ್ಯಂತ ದಕ್ಷವಾದ ಮತ್ತು ಉತ್ತಮ ಕ್ಷೇಮತೆಯನ್ನು ಹೊಂದಿರುವ ಸಬ್ ಮರಿನ್'ಗಳನ್ನೂ ದೇಶಿಯವಾಗಿ ನಿರ್ಮಾಣ ಮಾಡಲಾಗುತ್ತದೆ ಇದರ ಜೊತೆಯಲ್ಲಿ ಭಾರತೀಯ ನೌಕಾಪಡೆಯ ಸಲಕರಣೆಗಳಿಗೆ ವಿದೇಶಗಳ ಮೇಲೆ ಅವಲಂಬವಾಗುವುದನ್ನು ತಪ್ಪಿಸಲಿದೆ ಎಂದು ತಿಳಿದು ಬಂದಿದೆ. * ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶೀಯವಾಗಿ 6 ಅತ್ಯಾಧುನಿಕ ಜಲಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆಗೆ ಪಿ-75 ಎಂದು ಹೆಸರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಜಲಂತರ್ಗಾಮಿಗಳ ನಿರ್ಮಾಣದ ಜೊತೆಯಲ್ಲಿ 6,800 ಕೋಟಿ ರೂ. ಮೌಲ್ಯದ ಮಿಲಟರಿ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಸ್ವಾದೀನ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.