Job Description: * ಪ್ರಸ್ತುತ ರಷ್ಯಾ ಸರ್ಕಾರದ ಪ್ರತಿಷ್ಠಿತ "ಗೋಲ್ಡನ್ ಪೀಸ್ ಮೇಕರ್ ಸ್ಟಾರ್" ಪ್ರಶಸ್ತಿಗೆ ಬೆಂಗಳೂರು ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷರಾಗಿರುವ ಎಸ್.ಆರ್.ವಿಶ್ವನಾಥ್ ಅವರನ್ನುಆಯ್ಕೆ ಮಾಡಲಾಗಿದೆ. * ಮಾರಿಷಸ್'ನ ಮಿನಿಸ್ಟರ್ ಕೌನ್ಸೆಲರ್ ಜೆ.ಬಿಸ್ಸೊಂಡೊಯಾಲ್ ಅವರು ಯಲಹಂಕ ಶಾಸಕ ವಿಶ್ವನಾಥ್ ಅವರೊಂದಿಗೆ ವರ್ಚುವಲ್ ಸಭೆ ನಡೆಸಿದರು ಅದೇ ಸಭೆಯಲ್ಲಿ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದರು. * ಶಾಸಕ ವಿಶ್ವನಾಥ್ ಅವರು ಪ್ರಸ್ತುತ ಸಮಾಜಸೇವೆ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಉತ್ತಮವಾದ ಸೇವೆ ಸಲ್ಲಿಸುತ್ತಿರುವದನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.