Job Description: * ಪ್ರಸ್ತುತ ಮುಸ್ಲಿಂ ದೇಶವಾಗಿರುವ ಸೌದಿ ಅರೇಬಿಯಾ ಇದೀಗ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಕಠಿಣ ನಿಯಮವನ್ನು ಜಾರಿಗೊಳಿಸಿದೆ. * ಕೇವಲ ದಿನಕ್ಕೆ 2 ಬಾರಿ ಧ್ವನಿವರ್ಧಕ ಬಳಕೆ ಮಾಡಬೇಕು ಮತ್ತು ಅದು ಅತೀ ಕಡಿಮೆ ಪ್ರಮಾಣದ ಶಬ್ದವನ್ನು ಬಳಸಿ ಬಳಕೆ ಮಾಡಬೇಕು ಎಂದು ತಿಳಿಸಿದೆ ಒಂದು ಪಕ್ಷ ಈ ನಿಯಮವನ್ನು ಉಲ್ಲಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ಆದೇಶ ಹೊರಡಿಸಿದೆ. * ಮಸೀದಿಗಳಲ್ಲಿ ಅಜಾನ್ ಮತ್ತು ಪ್ರಾರ್ಥನೆ ಸಲ್ಲಿಸುವ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು ಎಂದು ಸೂಚಿಸಿ ಸೌದಿ ಸರ್ಕಾರವು ಗೆಜೆಟ್ನಲ್ಲಿ ಉಲ್ಲೇಖ ಮಾಡಿದ್ದಾರೆ ಇದನ್ನು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಅಬ್ದುಲ್ ಲತೀಫ್ ಅಲ್-ಶೇಖ್ ಅವರು ಸುತ್ತೋಲೆಯನ್ನು ಹೊರಡಿಸಿದ್ದಾರೆ, ಮತ್ತು ಎಲ್ಲಾ ಮಸೀದಿಗಳು ಈ ಸುತ್ತೋಲೆಯಲ್ಲಿ ಇರುವ ಮಾರ್ಗಸೂಚಿಗಳನ್ನು ಕಡ್ಡಾಯ ಮತ್ತು ನಿಯಮಿತವಾಗಿ ಅನುಸರಿಸಬೇಕು ಎಂದು ಹೇಳಿದ್ದಾರೆ.