Job Description: * ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಇದೀಗ ರಾಜ್ಯ ಸರ್ಕಾರವು ಬಾಲ ಸೇವಾ ಯೋಜನೆ'ಯನ್ನು ಘೋಷಿಸಿದೆ. * ರಾಜ್ಯ ಸರ್ಕಾರದ ಈ ಬಾಲ ಸೇವಾ ಯೋಜನೆ ಅಡಿಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ತಿಂಗಳಿಗೆ 3500 ರೂ. ನೀಡಲಾಗುವದು ಎಂದು ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. * 10ನೇ ತರಗತಿ ಪೂರ್ಣಗೊಳಿಸಿದ ಮಕ್ಕಳಿಗೆ ಉನ್ನತ ಶಿಕ್ಷಣ, ಉಚಿತವಾಗಿ ಲ್ಯಾಪ್ಟಾಪ್, ಟ್ಯಾಬ್ ಮತ್ತು 21ವರ್ಷ ಪೂರೈಸಿದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಮದುವೆ, ಸ್ವಯಂ ಉದ್ಯೋಗದ ಉದ್ದೇಶಗಳಿಗೆ 1ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದರು.