Job Description: * ಪ್ರಸ್ತುತ 35ನೇಯ ಗೋವಾ ರಾಜ್ಯತ್ವ ದಿನದ ಪ್ರಯುಕ್ತ ರಾಜ್ಯದಲ್ಲಿ ಕೋವಿಡ್-19 ನಿಂದ ಮೃತಪಟ್ಟಿರುವ ಮತ್ತು ಆರ್ಥಿಕ ದೃಷ್ಠಿಯಿಂದ ಹಿಂಜರಿದಿರುವ ಕುಟುಂಬಗಳಿಗೆ 2 ಲಕ್ಷ ರೂ ಪರಿಹಾರವನ್ನು ನೀಡಲಾಗುವದು ಮತ್ತು 10ನೇ ತರಗತಿಯ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ಇದರ ಜೊತೆಯಲ್ಲಿ ಮುಖ್ಯಮಂತ್ರಿ ಅನಾಥ ಆಧಾರ ಯೋಜನೆಯನ್ನು ಆರಂಭಿಸಲಾಗುವದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾಸಾವಂತ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಈ ಹಿಂದೆ ಗೋವಾ ಒಂದು ರಾಜ್ಯ ಎಂದು ಘೋಷಣೆ ಆಗುವದಕ್ಕಿಂತ ಮೊದಲು ಈ ರಾಜ್ಯವನ್ನು ಗೋವಾ ದಮನ್ ಮತ್ತು ದೀವ್ ಎಂಬ ಹೆಸರಿನಿಂದ ಕರೆಯಲಾಗುತಿತ್ತು, ಇದೇ ಕಾರಣದಿಂದಾಗಿ ಇನ್ನು ಈ ರಾಜ್ಯದಲ್ಲಿ ಹಲವು ಕಾಯ್ದೆಗಳು ಇನ್ನು ಅದೇ ಹೆಸರಿನಲ್ಲೇ ಇವೆ, ಹಾಗು ಇವುಗಳನ್ನು ತಿದ್ಧುಪಡಿಮಾಡಿ ಕೇವಲ ಗೋವಾ ಎಂದು ಇಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಾವಂತ್ ತಿಳಿಸಿದರು.