Job Description: * ಕೀನ್ಯಾವು ಹಿಂದೂ ಮಹಾಸಾಗರದ ಕರಾವಳಿಯನ್ನು ಹೊಂದಿರುವ ಪೂರ್ವ ಆಫ್ರಿಕಾದ ದೇಶವಾಗಿದೆ, ಪ್ರಸ್ತುತ ಆಫ್ರಿಕಾ ಖಂಡದ ಪ್ರಮುಖ ರಾಷ್ಟ್ರ ಕೀನ್ಯಾ ತನ್ನ ಕೋವಿಡ್-19 ಪರಿಹಾರವಾಗಿ ಭಾರತಕ್ಕೆ 12 ಟನ್ ಆಹಾರೋತ್ಪನ್ನಗಳನ್ನು ದೇಣಿಗೆ ರೊಪದಲ್ಲಿ ನೆರವು ನೀಡಿದೆ. * ಕೀನ್ಯಾ ಸ್ಥಳೀಯವಾಗಿ ಉತ್ಪಾದಣೆ ಮಾಡುವಂತಹ ಚಹಾ, ಕಾಫಿ ಮತ್ತು ನೆಲಗಡಲೆಯ 12 ಟನ್ ಭಾರತೀಯ ರೆಡ್ಕ್ರಾಸ್ ಸೊಸೈಟಿಗೆ ದೇಣಿಗೆಯಾಗಿ ನೀಡಿದೆ, ಈ ಆಹಾರ ಪಧಾರ್ಥಗಳನ್ನು ಮಹಾರಾಷ್ಟ್ರ ರಾಜ್ಯದಾದ್ಯಂತ ಹಂಚಿಕೆ ಮಾಡಲಾಗುವದು ಎಂದು ತಿಳಿಸಲಾಗಿದೆ. * ಸದ್ಯ ಆಫ್ರಿಕನ್ ದೇಶದ ಹೈ ಕಮಿಷನರ್ ವಿಲ್ಲಿ ಬೆಟ್ ಅವರು ಈ ಕೋವಿಡ್-19 ಪರಿಸ್ಥಿತಿಯಲ್ಲಿ ಕೀನ್ಯಾ ಪ್ರಜೆಗಳು ಭಾರತ ಸರ್ಕಾರಕ್ಕೆ ಜೊತೆಯಾಗಿ ನಿಲ್ಲಬೇಕೆಂದು ಕೀನ್ಯಾ ಸರ್ಕಾರ ಬಯಸುತ್ತದೆ ಎಂದು ತಿಳಿಸಿದ್ದಾರೆ.