Job Description: * ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಚ್.ಎಸ್.ದೊರೆಸ್ವಾಮಿ ಅವರು ತಮ್ಮ 104ನೇ ವರ್ಷ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರು 1918ರ ಏಪ್ರಿಲ್. 10ರಂದು ಜನಿಸಿದರು ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು, ಹಾಗೂ ಇವರು ಕನ್ನಡ ಜನಪ್ರಿಯ ಪತ್ರಿಕೆಯಾಗಿದ್ದ ಪೌರವಾಣಿ ವರದಿಗಾರರಾಗಿ ಬ್ರಿಟಿಷರ ಕಾಲದಲ್ಲಿ ಹೆಸರುವಾಸಿಯಾಗಿದ್ದರು, ಮತ್ತು ಇವರು ಸಾಹಿತ್ಯದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಣೆ ಮಾಡಿದ್ದರು, ಪ್ರಸ್ತುತ ದೊರೆಸ್ವಾಮಿ ಎಂದರೆ ಕರ್ನಾಟಕದ ಸಾಕ್ಷಿಪ್ರಜ್ಞೆ ಎಂದು ಬಣ್ಣಿಸುತಿದ್ದರು. * ದೊರೆಸ್ವಾಮಿ ಅವರ ವಿದ್ಯಾಭ್ಯಾಸ ಮುಕ್ತಾಯವಾದ ಬಳಿಕ 1942ರ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದರು, ಮತ್ತು ಅದೇ ವರ್ಷದಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿದ್ದರು.