Job Description: * ಪ್ರಸ್ತುತ ಕೋವಿಡ್-19 ಪರಿಸ್ಥಿತಿಯಲ್ಲಿ 20 ಕೋಟಿ ಡೋಸ್ ಲಸಿಕೆ ವಿತರಿಸಿದ 2ನೇ ರಾಷ್ಟ್ರ ಭಾರತವಾಗಿದೆ ಹಾಗೂ ಮೊದಲನೇ ರಾಷ್ಟ್ರ ಅಮೇರಿಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. * ಪ್ರಸ್ತುತ ಅಮೇರಿಕ ದೇಶವು 124 ದಿನಗಳಲ್ಲಿ 20 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದೆ ಮತ್ತು ಭಾರತವು 130 ದಿನಗಳಲ್ಲಿ 20 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. * ಇತರೆ ದೇಶಗಳು ಅಂದರೆ ಬ್ರಿಟನ್ 168 ದಿನಗಳಲ್ಲಿ 5.1 ಕೋಟಿ ಡೋಸ್ ಲಸಿಕೆ ನೀಡಿದೆ, ಮತ್ತು ಬ್ರೆಜಿಲ್ ದೇಶವು 128 ದಿನಗಳಲ್ಲಿ 5.9 ಕೋಟಿ ಡೋಸ್ ಹಾಗೂ ಜರ್ಮನಿ 149 ದಿನಗಳಲ್ಲಿ 4.9 ಕೋಟಿ ಡೋಸ್ ಲಸಿಕೆಯನ್ನು ವಿತರಣೆ ಮಾಡಿದೆ. * ಜನವರಿ. 16ರಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. * ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಮತ್ತು ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಕದಿಂದ ಅನುಮೋದನೆ ನೀಡಿದೆ ಅದರ ಜೊತೆಯಲ್ಲಿ ರಷ್ಯಾ ದೇಶದ ಸ್ಪುಟ್ನಿಕ್-ವಿ ಲಸಿಕೆಯನ್ನು ತುರ್ತು ಬಳಕೆ ಮಾಡಲು ಅನುಮತಿ ದೊರೆತಿದೆ.