Job Description: * ನೊಬೆಲ್ ಪ್ರಶಸ್ತಿ ಪಡೆದಿರುವ ಭಾರತೀಯ ಅರ್ಥಶಾಸ್ತ್ರಜ್ಞರಾಗಿರುವ ಅಮರ್ತ್ಯ ಕುಮಾರ್ ಸೇನ್ ಅವರಿಗೆ ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಸ್ಪೇನ್ನ ಅಗ್ರ ರಾಜಕುಮಾರಿ ಆಫ್ ಅಸ್ಟೂರಿಯಸ್ ಪ್ರಶಸ್ತಿ ಲಭಿಸಿದೆ ಎಂದು ಸ್ಪ್ಯಾನಿಷ್ ಬಹುಮಾನ ಪ್ರತಿಷ್ಠಾನ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಈ ಸ್ಪೇನ್'ನ ಸಾಮಾಜಿಕ ವಿಜ್ಞಾನ ಪ್ರಶಸ್ತಿಗಾಗಿ 20 ದೇಶಗಳ 41 ಅಭ್ಯರ್ಥಿಗಳು ಭಾಗವಹಿಸಿದ್ದರು, ಅವರಲ್ಲಿ ಈ ಪ್ರಶಸ್ತಿಗೆ 87 ವರ್ಷ ವಯಸ್ಸಿನ ಅಮರ್ತ್ಯ ಕುಮಾರ್ ಸೇನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಿನ್ಸೆಸ್ ಆಫ್ ಅಸ್ಟೂರಿಯಸ್ ಫೌಂಡೇಶನ್ ಸುದ್ದಿ ವಾಹಿನಿಯಲ್ಲಿ ವಿವರಣೆಯನ್ನು ನೀಡಿದೆ. * ಈ ಪ್ರಶಸ್ತಿ 50 ಸಾವಿರ ಯುರೋಗಳ ನಗದು ಬಹುಮಾನ, ಜೋನ್ ಮಿರೊ ಶಿಲ್ಪವನ್ನು ಒಳಗೊಂಡಿರುತ್ತದೆ ಪ್ರಸ್ತುತ ಈ ಪ್ರಶಸ್ತಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. * ಅಮರ್ತ್ಯ ಕುಮಾರ್ ಸೇನ್ ಅವರ ಈ ಪ್ರಸಿದ್ಧ ಕೃತಿಯಲ್ಲಿ ಬಡತನ ಹಾಗೂ ಅದರ ಕ್ಷಾಮಗಳು, ಮತ್ತು ಹಸಿವು ಆಹಾರದ ಕೊರತೆಯ ಪರಿಣಾಮ ಅಲ್ಲ ಆದರೆ ಅದರ ವಿತರಣೆಯ ಕಾರ್ಯವಿಧಾನಗಳಲ್ಲಿನ ಅಸಮಾನತೆಗಳು ಇವೆ ಎಂದು ಆನ್ ಎಂಟೈಟಲ್ಮೆಂಟ್ ಅಂಡ್ ಡಿಪ್ರಿವೇಷನ್ನಲ್ಲಿ ತೋರಿಸಿ ಕೊಟ್ಟಿದ್ದರು. * 1998ರಲ್ಲಿ ಅಮರ್ತ್ಯ ಸೇನೆ ಅವರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು.