Job Description: * ಪ್ರಸ್ತುತ ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ(CBI)ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. * ಈ ಮೊದಲು ಸುಬೋಧ್ ಕುಮಾರ್ ಜೈಸ್ವಾಲ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು, ಜೈಸ್ವಾಲ್ ಅವರನ್ನು ಸಿಬಿಐ(CBI)ನಿರ್ದೇಶಕರಾಗಿ ನೇಮಕ ಮಾಡಲು ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ವಿ. ರಮಣ ಅವರ ತಂಡವು ಅನುಮೋದನೆ ನೀಡಿದೆ. * 2021ರ ಫೆಬ್ರವರಿ. 2 ರಿಂದ ಆರ್.ಕೆ. ಶುಕ್ಲಾ ಅವರು ಸಿಬಿಐ(CBI)ನಿರ್ದೇಶಕ ಹುದ್ದೆಯಿಂದ ನಿವೃತ್ತಿಯಾದ ನಂತರ ಇದೀಗ ಈ ಹುದ್ದೆಗೆ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ, ಪ್ರಸ್ತುತ ಈ ಹುದ್ದೆಗೆ 109 ಅಧಿಕಾರಿಗಳ ಹೆಸರನ್ನು ಪರಿಗಣಿಸಲಾಗಿತ್ತು ಅವರಲ್ಲಿ 3 ಅಧಿಕಾರಿಗಳ ಹೆಸರನ್ನು ಸಮಿತಿ ಆಯ್ಕೆ ಮಾಡಿತ್ತು ಅದರಲ್ಲಿ ಅಂತಿಮವಾಗಿ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಹೆಸರನ್ನು ಮುಂಬರುವ 2 ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕ ಹುದ್ದೆಗೆ ಆಯ್ಕೆ ಮಾಡಲಾಗಿದೆ.