Job Description: * ಭಾರತವು ಮೇ 24, 2021 ರಂದು ವಿಮಾನ ಮಾರ್ಗದ ಮೂಲಕ GI ಪ್ರಮಾಣೀಕರಿಸಿದ ಶಾಹಿ ಲಿಚ್ಚಿಯ ಮೊದಲ ರವಾನೆಯನ್ನು ಬಿಹಾರದಿಂದ ಯುನೈಟೆಡ್ ಕಿಂಗ್ಡಮ್ಗೆ ರಫ್ತು ಮಾಡಲಾಗಿದೆ. * ಭೌಗೋಳಿಕ ಸೂಚನೆ (GI) ಟ್ಯಾಗ್ ಗುಣಮಟ್ಟ ಮತ್ತು ವಿಶಿಷ್ಟತೆಯ ಭರವಸೆಯನ್ನು ನೀಡುತ್ತದೆ, ಹಾಗೂ ಮೂಲಭೂತವಾಗಿ ಅದರ ಮೂಲದ ಸ್ಥಳದೊಂದಿಗೆ ಸಂಪರ್ಕ ಹೊಂದಿದೆ, ಇದೇ ತರಹದ ವಸ್ತುಗಳನ್ನು ಮಾರಾಟ ಮಾಡಲು ಬೇರೆ ಯಾವುದೇ ನಿರ್ಮಾಪಕರು ಈ ಹೆಸರನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿಯನ್ನು ನೀಡದ ಕಾರಣ ಇದು ಉತ್ಪನ್ನದ ಪ್ರೀಮಿಯಂ ಬೆಲೆಯನ್ನು ಪಡೆಯಲು ಬೆಳೆಗಾರರಿಗೆ ಸಹಾಯ ನೀಡುತ್ತದೆ. * ನೋಂದಾಯಿತವಾಗಿರುವ GI'ಗಳು ( ಜಿಯಾಗ್ರಫಿಕಲ್ ಇಂಡಿಕೇಷನ್): ಡಾರ್ಜಿಲಿಂಗ್ ಚಹಾ, ಕಾಂಗ್ರಾ ವರ್ಣಚಿತ್ರಗಳು, ತಿರುಪತಿ ಲಡ್ಡು, ನಾಗ್ಪುರ ಕಿತ್ತಳೆ ಮತ್ತು ಕಾಶ್ಮೀರ ಪಾಶ್ಮಿನಾ ಈ ಎಲ್ಲವು ಭಾರತದಲ್ಲಿ ನೋಂದಾಯಿತ GI'ಗಳಾಗಿವೆ. * 2018ರಲ್ಲಿ GI'ಟ್ಯಾಗ್ ಪಡೆದ ಶಾಹಿ ಲಿಚ್ಚಿ ಬಿಹಾರದ ಕೃಷಿ ಉತ್ಪನ್ನವಾಗಿದೆ, ಪ್ರಸ್ತುತ ಇದು ಬಿಹಾರದಿಂದ GI ಪ್ರಮಾಣೀಕರಣ ಪಡೆದ 4ನೇ ಕೃಷಿ ಬೆಳೆಯಾಗಿದೆ (ಉತ್ಪನ್ನ), ಇನ್ನುಳಿದ ಬಿಹಾರದಿಂದ 3 ಉತ್ಪನ್ನಗಳು ಮಗಹಿ ಪಾನ್, ಜರ್ದಲು ಮಾವು ಮತ್ತು ಕಟರ್ನಿ ಅಕ್ಕಿಗಳಾಗಿವೆ. * ಪ್ರಸ್ತುತ ಭಾರತದಲ್ಲಿನ ಬಿಹಾರ್ ರಾಜ್ಯವು ಲಿಚಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ, ಬಿಹಾರದ ರಾಜ್ಯದಲ್ಲಿನ ಪ್ರದೇಶವು ಈ ಬೆಳೆಯನ್ನು ಅನುಕೂಲಕರ ವಾತಾವರಣವನ್ನು ಹೊಂದಿದೆ. * ಪ್ರಸ್ತುತ ಬಿಹಾರದ ವೈಚಿ, ಮುಜಾಫರ್ಪುರ್, ಚಂಪಾರನ್, ಸಮಸ್ತಿಪುರ, ಬೆಗುಸರಾಯ್ ಹಾಗೂ ಇದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಲಿಚ್ಚಿಯನ್ನು ಉತ್ಪಾದಿಸಲಾಗುತ್ತದೆ, ಇದೀಗ ಭಾರತವು 2ನೇ ಸ್ಥಾನದಲ್ಲಿದೆ, ಮತ್ತು ಚೀನಾ ದೇಶವು ಪ್ರಥಮ ಸ್ಥಾನದಲ್ಲಿದೆ.