Job Description: * ಭಾರತದ ನರೀಂದರ್ ಬಾತ್ರಾ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಅಧ್ಯಕ್ಷರಾಗಿ ಸತತ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ. * ಹಾಕಿ ಫೆಡರೇಶನ್ (FIH) ಅಧ್ಯಕ್ಷ ಸ್ಥಾನಕ್ಕೆ ಈ ವರ್ಚುವಲ್ ಚುನಾವಣೆಯನ್ನು ನಡೆಸಲಾಗಿತ್ತು, ಈ ಚುನಾವಣೆಗೆ ಒಟ್ಟು 124 ಸದಸ್ಯ ರಾಷ್ಟ್ರಗಳು ಆನ್ಲೈನ್ ಚುನಾವಣೆಯಲ್ಲಿ ಭಾಗಿಯಾಗಿದ್ದವು, ಈ ಚುನಾವಣೆಯಲ್ಲಿ ಬೆಲ್ಜಿಯಂ ಹಾಕಿ ಫೆಡರೇಶನ್ ಅಧ್ಯಕ್ಷ ಮಾರ್ಕ್ ಕೌಡ್ರನ್ ವಿರುದ್ಧ 2 ಮತಗಳಿಂದ ನರೀಂದರ್ ಬಾತ್ರಾ ಅವರು ಜಯ ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ನರೀಂದರ್ ಬಾತ್ರಾ ಅವರು 63 ಮತಗಳು ಹಾಗೂ ಕೌಡ್ರನ್ ಅವರಿಗೆ 61 ಮತಗಳನ್ನೂ ಪಡೆದಿದ್ದಾರೆ. * ಪ್ರಸ್ತುತ ನರೀಂದರ್ ಬಾತ್ರಾ ಅವರು ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷರು ಆಗಿದ್ದಾರೆ, ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರು ಆಗಿದ್ದಾರೆ, ಬಾತ್ರಾ ಅವರು 2024ರ ತನಕ ಅಧಿಕಾರದಲ್ಲಿ ಇರಲಿದ್ದಾರೆ.