Job Description: * ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯ ಪ್ರಕಾರ ಏಷ್ಯಾದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಮತ್ತು ಎರಡನೇ ಸ್ಥಾನದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. * ಪ್ರಸ್ತುತ ಚೀನಾದ ತಂಪು ಪಾನೀಯ ಮತ್ತು ಫಾರ್ಮಾ ಉದ್ಯಮಿ ಝೊಂಗ್ ಶನ್ಶನ್ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಅವರು ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. * ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಜಾಗತಿಕವಾಗಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಕೇಶ್ ಅಂಬಾನಿ 13ನೇ ಸ್ಥಾನ ಮತ್ತು ಗೌತಮ್ ಅದಾನಿ 14ನೇ ಸ್ಥಾನದಲ್ಲಿದ್ದಾರೆ. * ಪ್ರಸ್ತುತ ಅಂಬಾನಿಯ ಒಟ್ಟು ಸಂಪತ್ತು 76.5 ಬಿಲಿಯನ್ ಡಾಲರ್ ಮತ್ತು ಗೌತಮ್ ಅದಾನಿಯ ಒಟ್ಟು ಸಂಪತ್ತು 66.5 ಬಿಲಿಯನ್ ಡಾಲರ್ ಆಗಿದೆ ಎಂದು ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯನ್ನು ನೀಡಿದೆ.