Job Description: * ತೌಕ್ತೆ ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ಅನಾಹುತಗಳನ್ನು ಸೃಷ್ಟಿಸಿದೆ, ಅಲ್ಲದೆ ಹಾನಿಯನ್ನು ಕೂಡ ಉಂಟುಮಾಡಿದೆ, ಮತ್ತೆ ಇದು ಉತ್ತರಮುಖಿಯಾಗಿ ಮುಂದುವರೆದಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಈ ತೌಕ್ತೆ ಚಂಡಮಾರುತವು ಮಂಗಳವಾರದ ಸಮಯಕ್ಕೆ ಗುಜರಾತ್ನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ತಿಳಿಸಿದೆ. * ಪ್ರಸ್ತುತ ಈ ತೌಕ್ತೆ ಚಂಡಮಾರುತವು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆ ಮತ್ತು ಭೂಕುಸಿತ ಹಾಗೂ ಹಾನಿಯನ್ನು ಉಂಟುಮಾಡುತ್ತದೆ ಎಂದು ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿತ್ತು. * ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ (NDRF) 5ರಾಜ್ಯಗಳಲ್ಲಿ ವಿಪತ್ತು ನಿರ್ವಹಣೆಗೆ 50ಕ್ಕೂ ಹೆಚ್ಚು ತಂಡಗಳುನ್ನು ರಚಿಸಿದೆ.