Job Description: * ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಸಂಶೋಧನ ಕೇಂದ್ರದಲ್ಲಿರುವ ಇಸ್ರೋ ವಿಜ್ಞಾನಿಗಳು ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್ಗಳು, ಆಮ್ಲಜನಕ ಸಾಂದ್ರಕಗಳನ್ನು ಸಿದ್ಧಪಡಿಸಿದ್ದಾರೆ, ಮತ್ತು ಈ ಕೋವಿಡ್-19'ನ ಸಮಯದಲ್ಲಿ ಈ ಸಾಧನಗಳನ್ನು ವಿವಿಧ ಉದ್ಯಮಗಳಿಗೆ ಉಚಿತವಾಗಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ವಿಎಸ್ಎಸ್ಸಿ ನಿರ್ದೇಶಕ ಡಾ.ಎಸ್.ಸೋಮನಾಥ್ ವಿವರಣೆಯನ್ನು ನೀಡಿದ್ದಾರೆ. * ಪ್ರಸ್ತುತ ಇಸ್ರೋ (ISRO) 3 ರೀತಿಯ ಅಥವಾ ವಿಧದ ಅತ್ಯಾಧುನಿಕ ವೆಂಟಿಲೇಟರ್ಗಳನ್ನು ಸಿದ್ಧಪಡಿಸಿದೆ, 1ನೇ ವೆಂಟಿಲೇಟರ್ ದಿನಬಳಕೆಗೆ ಉತ್ತಮವಾದ ಗುಣಮಟ್ಟವನ್ನು ಹೊಂದಿದೆ, 2ನೇ ವೆಂಟಿಲೇಟರ್ ಗಾಳಿ ಕಡಿಮೆ ಪ್ರಮಾಣದಲ್ಲಿ ಇದ್ದರು ಕೂಡ ತನ್ನ ಕಾರ್ಯವನ್ನು ಸುಗಮವಾಗಿ ನಿರ್ವಹಿಸುತ್ತದೆ, 3ನೇ ವೆಂಟಿಲೇಟರ್ ವಿದ್ಯುತ್ ಅಗತ್ಯ ಇಲ್ಲದೆ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. * ಭಾರತೀಯ ಇಸ್ರೋ ಸಿದ್ಧಪಡಿಸಿರುವ ಈ ವೆಂಟಿಲೇಟರ್ ಸಾಧನಗಳು ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಸರಿ ಸುಮಾರು ಶೇ.95ರಷ್ಟು ಶುದ್ಧ ಆಮ್ಲಜನಕವನ್ನು ಮಾನವನ ಶರೀರಕ್ಕೆ ನೀಡುತ್ತವೆ ಎಂದು ಇಸ್ರೋ ವಿಜ್ಞಾನಿಗಳು ಈ ಬಗೆಯ ಮಾಹಿತಿಯನ್ನು ನೀಡಿದ್ದಾರೆ.