Job Description: * ಚೀನಾ ದೇಶವು ತನ್ನ ರೋವರ್'ನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ, ಹಾಗೂ ಇತಿಹಾಸದಲ್ಲಿ ಕೆಂಪು ಗ್ರಹ ಮಂಗಳನ ಮೇಲೆ ರೋವರ್ ಇಳಿಸಿದ 2ನೇ ದೇಶವಾಗಿದೆ ಎಂದು ಚೀನಾ ರಾಷ್ಟ್ರದ ಸರ್ಕಾರಿ ಸಿನ್ಹುವಾ ಸುದ್ದಿವಾಹಿನಿ ಸಂಸ್ಥ ಮಾಹಿತಿಯನ್ನು ನೀಡಿದೆ. * ಸೌರಶಕ್ತಿ ಚಾಲಿತ ಜುರಾಂಗ್ ರೋವರ್ ಸುಮಾರು 240 ಕೀ. ಗ್ರಾಂಗಳಷ್ಟು ತೂಕವಿದೆ ಮತ್ತು ಈ ರೋವರ್ 6 ವೈಜ್ಞಾನಿಕ ಸಾಧನಗಳನ್ನು ಒಳಗೊಂಡಿದೆ. * ಚೀನಾ ದೇಶದ ಈ ರೋವರ್ ಮಂಗಳ ಗ್ರಹದ ಮೇಲ್ಮೈಯಲ್ಲಿರುವ ಜೀವಿಗಳನ್ನು ಹುಡುಕಲು, ಮೂರು ತಿಂಗಳ ಕಾರ್ಯಾಚರಣೆಗೆ ಲ್ಯಾಂಡರ್ನಿಂದ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. * ಹೈನಾನ್ನ ವೆನ್ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ಹಿಂದಿನ ವರ್ಷ ಜುಲೈ 23ರಂದು ಲಿಯಾನ್ ಮಾರ್ಚ್ 5ರ ರಾಕೆಟ್ ಮೂಲಕ ಟಿಯಾನ್ವೆನ್ -1 ಮಾರ್ಸ್ ಆರ್ಬಿಟರ್'ನ್ನು ಉಡಾವಣೆ ಮಾಡಲಾಯಿತು, ಇದು ತನ್ನ ಕಾರ್ಯಾಚರಣೆಯ ವೇಳೆಯಲ್ಲಿ ರೋವರ್ಗೆ ಅಗತ್ಯವಾದ ಸಂಕೇತವನ್ನು ನೀಡುತ್ತದೆ ಮತ್ತು ಒಂದು ಮಂಗಳದ ವರ್ಷಕ್ಕೆ ಗ್ರಹದ ಜಾಗತಿಕ ಸಮೀಕ್ಷೆಯನ್ನು ಕೂಡ ಮಾಡಲಿದೆ ಎಂದು ತಿಳಿದು ಬಂದಿದೆ.