Job Description: * ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು DRDO ಅಭಿವೃದ್ಧಿಪಡಿಸಿರುವ 2-ಡಿಜಿ ಕೊರೊನಾ ಔಷಧಿಯ ಮೊದಲ ಬ್ಯಾಚ್'ನ್ನು ಬಿಡುಗಡೆಗೊಳಿಸಿದರು, ಕೊರೊನಾ ಸೋಂಕಿತರಿಗೆ ತುರ್ತು ಚಿಕಿತ್ಸೆ ಸಮಯದಲ್ಲಿ ಭಾರತೀಯ DRDO ಸಿದ್ಧಪಡಿಸಿರುವ 2-ಡಿಯಾಕ್ಸಿ-ಡಿ-ಗ್ಲೂಕೋಸ್(2-ಡಿಜಿ) ಔಷಧಿ ಬಳಕೆಗೆ ಡಿಜಿಸಿಐ ಅನುಮೋದನೆ ಸಿಕ್ಕಿದೆ ತದನಂತರ 2-ಡಿಜಿ ಔಷಧಿಯ ಮೊದಲ ಕಂತಿನ ಔಷಧಿ ಬಿಡುಗಡೆ ಮಾಡಲಾಗಿದೆ. * DRDO ಅಭಿವೃದ್ಧಿ ಪಡಿಸಿರುವ 2-ಡಿಜಿ ಔಷಧಿ ಕೊರೊನಾ ಸೋಂಕು ತಗುಲಿರುವ ವ್ಯಕ್ತಿಗಳ ಆರೋಗ್ಯ ಸುಧಾರಿಸಲು ಈ ಔಷಧಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಹೇಳಿಕೆ ನೀಡಿದರು. * DRDO ಅಭಿವೃದ್ಧಿ ಪಡಿಸಿರುವ 2-ಡಿಜಿ ಔಷಧಿಯು ಪೌಡರ್ ರೂಪದಲ್ಲಿ ಸಿಗಲಿದೆ ಕೋರೋಣ ಸೋಕಿತ ವ್ಯಕ್ತಿಗೆ ಆಮ್ಲಜನಕ ಕಡಿಮೆಯಾಗಿದೆ ಅನ್ನುವ ಸಂಧರ್ಭದಲ್ಲಿ ಈ ಔಷಧಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವನೆ ಮಾಡುವದರಿಂದ ಅಮ್ಲಜನಕ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯಕಾರಿಯಾಗಲಿದೆ, ಪ್ರಸ್ತುತ ಈ ಔಷಧಿಯನ್ನು DRDO ಮತ್ತು ಡಾ.ರೆಡ್ಡಿ ಲ್ಯಾಬ್ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.