Job Description: * ರಾಷ್ಟ್ರೀಯ ಡೆಂಗ್ಯೂ ದಿನವನ್ನು ಪ್ರತಿವರ್ಷ ಮೇ.16 ರಂದು ಆಚರಿಸಲಾಗುತ್ತದೆ, ಡೆಂಗ್ಯೂನ ರೋಗ ಲಕ್ಷಣಗಳು, ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಈ ದಿನ ಆಚರಣೆ ಮಾಡಲಾಗುತ್ತದೆ, ಪ್ರಸ್ತುತ ಡೆಂಗ್ಯೂ ಈಡಿಸ್ ಸೊಳ್ಳೆಯಿಂದ ಹರಡುವ ವೈರಲ್ ಜ್ವರವಾಗಿದೆ. * ಡೆಂಗ್ಯೂ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕಾಗಿದೆ, ಇದು ಹಾಳಾಗಿರುವ ಅಥವಾ ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿಗಳಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ ಇದರಿಂದ ಸೋಂಕು ಹರಡುತ್ತದೆ ಮತ್ತು ಇದು ಮಳೆಗಾಲದಲ್ಲಿ ಹೆಚ್ಚಾಗಿ ಹರಡುತ್ತವೆ. * ಡೆಂಗ್ಯೂ ಜ್ವರವು ಉಷ್ಣವಲಯದ ರೋಗವಾಗಿದೆ ಇದು ಸಾಮಾನ್ಯವಾಗಿ 14ದಿನಗಳಲ್ಲಿ ಲಕ್ಷಣಗಳನ್ನೂ ತೋರಿಸುತ್ತದೆ. ಡೆಂಗ್ಯೂ ಜ್ವರದ ಲಕ್ಷಣಗಳು: • ತೀವ್ರ ತಲೆನೋವು • ಕಣ್ಣು ನೋವು • ಜಂಟಿ ಮತ್ತು ಸ್ನಾಯು ನೋವು • ಹಸಿವಾಗದಿರುವುದು, ಉದರದ ಅಸ್ವಸ್ಥತೆ • ತುರಿಕೆ • 103 ಡಿಗ್ರಿಗಿಂತಲೂ ಹೆಚ್ಚಿನ ಜ್ವರ • ಅತಿಯಾದ ಸುಸ್ತು.