Job Description: * ಪ್ರಸ್ತುತ ಅಮೇರಿಕದ ರೋಗ ನಿಯಂತ್ರಣ ಸಂಸ್ಥೆಯು ಅಮೇರಿಕ ದೇಶದಲ್ಲಿ ಕೊರೋನಾ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಘೋಷಣೆ ಮಾಡಿದೆ, ಈ ಮಾಹಿತಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್'ರವರು ತಿಳಿಸಿದ್ದಾರೆ. * ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ ಸೋಂಕು ವಿಶ್ವ ವ್ಯಾಪಿಯಾಗಿ ಹರಡುತ್ತಿದೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿತ್ತು, ಇದಾದ ನಂತರ ಇತ್ತೀಚಿಗೆ ಇಸ್ರೇಲ್ ಕೋವಿಡ್-19 ರೋಗವನ್ನು ಗೆದ್ದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವದರಿಂದ ವಿನಾಯಿತಿಯನ್ನು ನೀಡಿತ್ತು. * ಇದೀಗ ಅಮೇರಿಕ ರೋಗ ನಿಯಂತ್ರಣ ಸಂಸ್ಥೆಯು ಲಸಿಕೆ ಪಡೆದವರು ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಬೇಕಿಲ್ಲ ಎಂಬ ಮಾಹಿತಿಯನ್ನು ತನ್ನ ದೇಶದ ಜನಕ್ಕೆ ತಿಳಿಸಿದೆ, ಸದ್ಯ ಅಮೇರಿಕ ಕೋರೋಣ ನಂತರ ಪೂರ್ವ ಜೀವನಕ್ಕೆ ಮರಳುತ್ತಿದೆ ಎಂದು ತಿಳಿಸಿದೆ ಎಂದು ಜೋ ಬೈಡನ್ ಹೇಳಿಕೆಯನ್ನು ನೀಡಿದ್ದಾರೆ.