Job Description: * ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಸಮೂಹದ ಅಧ್ಯಕ್ಷೆಯಾಗಿದ್ದ ಇಂದೂ ಜೈನ್ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದ ನಿಧನರಾಗಿದ್ದಾರೆ. * ಇಂದೂ ಜೈನ್ ಅವರು ಮಹಿಳಾ ಹಕ್ಕುಗಳ ಪ್ರತಿಪಾದಕಿಯಾಗಿ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ಕಲೆಗಳ ಪೋಷಣೆ ಮಾಡುವಲ್ಲಿ ಅಪಾರ ಕೊಡುಗೆಗಳನ್ನೂ ನೀಡಿದ್ದಾರೆ. * ಇಂದೂ ಜೈನ್ ಅವರು 1999 ರಿಂದ ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಸಮೂಹದ ಅಧ್ಯಕ್ಷೆಯಾಗಿ ಪತ್ರಿಕೆಗಳನ್ನು ಮುನ್ನಡೆಸುತಿದ್ದರು. * ಇಂದೂ ಜೈನ್ ಅವರು 1936 ರಲ್ಲಿ ಉತ್ತರ ಪ್ರದೇಶದ ಫೈಝಾಬಾದ್'ನಲ್ಲಿ ಜನಿಸಿದರು, ಮತ್ತು ಇವರು 1983ರಲ್ಲಿ ಎಫ್ಐಸಿಸಿಐ ಮಹಿಳಾ ವಲಯದ ಸಂಸ್ಥಾಪಕ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಮತ್ತು 1999ರಲ್ಲಿ ಟೈಮ್ಸ್ ಸಮೂಹದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.