Job Description: * ಮಧ್ಯಪ್ರದೇಶ ಸರ್ಕಾರದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೋವಿಡ್-19'ನ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ತಿಂಗಳಿಗೆ 5,000 ರೂ. ಪಿಂಚಣಿ ನೀಡಲಾಗುತ್ತದೆ ಎಂದು ತಿಳಿಸಿದೆ. * ಹಾಗೆಯೇ ಹೊಸದಾಗಿ ಉದ್ಯಮ ವ್ಯವಹಾರಗಳನ್ನು ಆರಂಭಿಸಲು ಬಡ್ಡಿರಹಿತ ಸಾಲ ಪಡೆಯು ಬಯಸುವವರಿಗೆ ರಾಜ್ಯ ಸರ್ಕಾರವು ಗ್ಯಾರಂಟಿಯನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಚೌಹಾಣ್ ಸುದ್ದಿವಾಹಿನಿಗಳಿಗೆ ಮಾಹಿತಿಯನ್ನು ನೀಡಿದರು. * ದೇಶದಲ್ಲಿ ಮೊದಲು ಮಧ್ಯಪ್ರದೇಶ ರಾಜ್ಯವು ಕೋವಿಡ್-19 ಸೋಕಿನಿಂದ ಸಾವನ್ನಪ್ಪಿದ ಮಕ್ಕಳು ಹಾಗೂ ವಯಸ್ಸಾದ ಜನರಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮಧ್ಯಪ್ರದೇಶ ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಾಹಿತಿಯನ್ನು ನೀಡಿದ್ದಾರೆ.