Job Description: * ವೈದ್ಯಕೀಯ ವೃತ್ತಿಪರ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್-19 ನಿಂದ ಸಾವನ್ನಪ್ಪಿದ್ದರೆ ಆ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಧನ ಪರಿಹಾರವನ್ನು ತಮಿಳುನಾಡು ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಘೋಷಣೆ ಮಾಡಿದ್ದಾರೆ. * ಈಗಿನ ಕೋವಿಡ್ ಕರ್ತವ್ಯದಲ್ಲಿ ಭಾಗಿಯಾದ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ, ಇತರ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹ ಧನವನ್ನು ಪಡೆಯಲಿದ್ದಾರೆ ಎಂದು ಡಿಎಂಕೆ ಪಕ್ಷವು ತಿಳಿಸಿದೆ. * ಪ್ರಸ್ತುತ ವೈದ್ಯರು 30 ಸಾವಿರ ರೂ. ದಾದಿಯರು ಹಾಗೂ ತರಬೇತು ವೈದ್ಯರು 20 ಸಾವಿರ ರೂ. ಸ್ವಚ್ಛತಾ ಕಾರ್ಮಿಕರು, ಸಿಟಿ ಸ್ಕಾನ್ ವಿಭಾಗದ ಸಿಬ್ಬಂದಿ ಮತ್ತು ಆಯಂಬುಲೆನ್ಸ್'ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರ ಸಿಬ್ಬಂದಿ 15 ಸಾವಿರ ರೂಪಾಯಿ ಪ್ರೋತ್ಸಾಹಕ ಧನ ಪಡೆಯಲಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. * ಈ ಹಿಂದೆ ಒಡಿಶಾ ಸರ್ಕಾರವು ಕೂಡ ವ್ಯಕ್ತಿಯು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್-19 ನಿಂದ ಸಾವನ್ನಪ್ಪಿದ್ದರೆ ಆ ಕುಟುಂಬಗಳಿಗೆ 50 ಲಕ್ಷ ರೂ. ಧನ ಪರಿಹಾರವನ್ನು ನೀಡಲಾಗುವದು ಎಂದು ತಿಳಿಸಿತ್ತು.