Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ 1.5 ಲಕ್ಷ ಆಕ್ಸಿಕೇರ್ ಯುನಿಟ್ಗಳನ್ನು ಪಿಎಂ ಕೇರ್ಸ್ ಫಂಡ್'ನ ಮೂಲಕ 322.5 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. * ಪ್ರಸ್ತುತ DRDO'ನ ಬೆಂಗಳೂರಿನ ಡಿಫೆನ್ಸ್ ಬಯೋ-ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿರುವ ಆಕ್ಸಿಕೇರ್'ನಿಂದಾಗಿ ರೋಗಿಗಳಿಗೆ ಆಮ್ಲಜನಕ ನೀಡುವಿಕೆ ಮಟ್ಟ ನಿಯಂತ್ರಿಸುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಹೈಪೋಕ್ಸಿಯಾ ಸ್ಥಿತಿಗೆ ಹೋಗದಂತೆ ತಡೆಯಬಲ್ಲ ಆಕ್ಸಿಕೇರ್ ಯುನಿಟ ಇವಾಗಿವೆ, ಆಕ್ಸಿಕೇರ್ ಎನ್ನುವುದು ಒಂದು ಎಸ್ಪಿಒ 2 ಆಧಾರಿತ ಆಮ್ಲಜನಕ ಪೂರೈಕೆ ವ್ಯವಸ್ಥೆಯಾಗಿದೆ. * ಈ ಆಕ್ಸಿಕೇರ್ ಯುನಿಟ್'ಗಳನ್ನೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗಾಗಿ ಬಳಕೆ ಮಾಡಲಾಗುತ್ತದೆ, ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಈ ಆಕ್ಸಿಕೇರ್ ಕಿಟ್ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ.