Job Description: * ಗಾಜಾ ನಗರ ಎಂದೂ ಕರೆಯಲ್ಪಡುವ ಗಾಜಾ ಪ್ರದೇಶ ಪ್ಯಾಲೇಸ್ಟಿನಿಯನ್ ನಗರವಾಗಿದೆ, ಇದು ಪ್ಯಾಲೆಸ್ತೇನ್ ರಾಜ್ಯದ ಅತಿದೊಡ್ಡ ನಗರವಾಗಿದೆ. ಕ್ರಿ.ಪೂ 15ನೇ ಶತಮಾನದಿಂದಲೂ ವಾಸಿಸುತ್ತಿದ್ದ ಗಾಜಾ ತನ್ನ ಇತಿಹಾಸದುದ್ದಕ್ಕೂ ಹಲವಾರು ವಿಭಿನ್ನ ಜನರು ಮತ್ತು ಸಾಮ್ರಾಜ್ಯಗಳಿಂದ ಪ್ರಾಬಲ್ಯ ಹೊಂದಿದೆ. * ಇತ್ತೀಚಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೇನ್'ನ ಹಮಾಸ್ ಬಂಡುಕೋರರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ, ಇಸ್ರೇಲ್ ಗಾಜಾ ನಗರದ ಮೇಲೆ ರಾಕೆಟ್ ದಾಳಿಯನ್ನು ನಡೆಸಿತ್ತು ಅದರಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮೂಲಕ ತಿಳಿದಿದೆ. * ಪ್ರಸ್ತುತ ಪ್ಯಾಲೆಸ್ತೇನ್'ನ ಹಮಾಸ್ ಬಂಡುಕೋರರೂ ಇಸ್ರೇಲ್ ಸೇನಾಪಡೆ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿದ್ದರು ಈ ರಾಕೆಟ್ ದಾಳಿಯಲ್ಲಿ ಇಸ್ರೇಲ್'ನ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. * ಇಸ್ರೇಲ್ ರಾಷ್ಟ್ರವು ನಡೆಸಿದ ರಾಕೆಟ್ ದಾಳಿಯಲ್ಲಿ ಗಾಜಾ ನಗರದ 35 ಜನ ಹಮಾಸ್ ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.