Job Description: * ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಿಂದ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಹಾಗೂ ಮುಂತಾದ ವೈದ್ಯಕೀಯ ಉಪಕರಣಗಳ ಸಮಸ್ಯೆಗಳು ಉಂಟಾಗುತ್ತಿವೆ. * ಪ್ರಸ್ತುತ ಬೆಂಗಳೂರು ನಗರದ ಕೋವಿಡ್-19 ಸೋಂಕಿತರಿಗೆ ಆಕ್ಸಿಜನ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಆಕ್ಸಿಜನ್ ಬಸ್ ಸೇವೆಯನ್ನು ತಂದಿದೆ, ಈ ಆಕ್ಸಿಜನ್ ಬಸ್'ಗಳನ್ನೂ ತುರ್ತು ಸಂದರ್ಭದಲ್ಲಿ ಬಳಸಿ ಕೋವಿಡ್-19 ಸೋಂಕಿತರ ಜೀವ ಉಳಿಸಲು ಸಹಾಯಕಾರಿ ಯಾಗಲಿವೆ ಎಂದು ತಿಳಿಸಿದ್ದಾರೆ. * ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮಿಳುನಾಡು ರಾಜ್ಯದ ಮಾದರಿಯ ಆಕ್ಸಿಜನ್ ಬಸ್'ಗಳನ್ನೂ ಕರ್ನಾಟಕದಲ್ಲಿ ಉದ್ಘಾಟಿಸಿದರು ಮತ್ತು ಅವುಗಳ ಕಾರ್ಯ ವೈಖರಿಯನ್ನು ವೀಕ್ಷಣೆ ಮಾಡಿದರು, ಪ್ರಸ್ತುತ ಈ ಬಸ್'ಗಳು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಮುಂದೆ ನಿಲ್ಲಿಸಲಾಗಿದೆ. * ಇದೀಗ ಬೆಂಗಳೂರಿನಲ್ಲಿ 1 ಆಕ್ಸಿಜನ್ ಬಸ್ ಪ್ರಯಾಣ ಬೆಳಸಲಿದೆ, ಈ ಬಸ್'ನ್ನು BBMP ನಿರ್ವಹಿಸಲಿದೆ, ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಆಕ್ಸಿಜನ್ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.