Job Description: * ಈ ಹಿಂದೆ ನೇಪಾಳದ ಪ್ರತಿ ಪಕ್ಷಗಳು ಪ್ರಧಾನಿ ಕೆಪಿ ಶರ್ಮಾ ಒಲಿ ಅವರಿಗೆ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸಿದ್ದವು ಇದರಿಂದಾಗಿ ನೇಪಾಳ ಪ್ರಧಾನಿ ವಿಶ್ವಾಸಮತ ಯಾಚನೆ ಮಾಡಿದರು, ಆದರೆ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ವಿಶ್ವಾಸಮತ ಕಳೆದುಕೊಂಡಿದ್ದಾರೆ ಈ ಮೂಲಕ ಪ್ರಧಾನಿ ಹುದ್ದೆ (ರಾಜೀನಾಮೆ) ತ್ಯಜಿಸಬೇಕಾಗಿದೆ. * ಈ ಹಿಂದೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಚೀನಾದ ಪ್ರಚೋದನೆಯಿಂದಾಗಿ ಭಾರತದ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿದ್ದರು, ಇದೀಗ ಇವರು ಸಂಸತ್ತಿನ ವಿಶ್ವಾಸ ಕಳೆದುಕೊಂಡಿದ್ದಾರೆ. * ಪ್ರಸ್ತುತ ನೇಪಾಳ 275 ಸದಸ್ಯರು ಇರುವ ಪಾರ್ಲಿಮೆಂಟ್'ನ್ನು ಹೊಂದಿದೆ, ವಿಶ್ವಾಸಮತ ಪಡೆಯ ಬೇಕಾದರೆ ಕನಿಷ್ಠ ಪಕ್ಷ 136 ಮತಗಳನ್ನು ಪಡೆಯಬೇಕು. * ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ಅವರ ಉಪಸ್ಥಿತಿಯಲ್ಲಿ ವಿಶ್ವಾಸ ಮತ ಯಾಚನೆ ಮಾಡಿದರು ಆದರೆ ಕೆಪಿ ಶರ್ಮಾ ಒಲಿ ಅವರು ಕೇವಲ 93 ಮತಗಳನ್ನು ಪಡೆದುಕೊಂಡು ಸೋಲ ಅನುಭವಿಸಿದ್ದಾರೆ, ಇದರಿಂದಾಗಿ ಕೆಪಿ ಶರ್ಮಾ ಒಲಿ ಅವರು ಪ್ರಧಾನಿ ಹುದ್ದೆ ತ್ಯಜಿಸಬೇಕಾಗಿದೆ.