Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಜೋಸ್ ಜೆ ಕಟ್ಟೂರ್ ಅವರನ್ನು ನೇಮಕ ಮಾಡಿದೆ. * ಜೋಸ್ ಜೆ ಕಟ್ಟೂರ್ ಅವರು ಈ ಮೊದಲು ಕರ್ನಾಟಕದ ಪ್ರಾದೇಶಿಕ ನಿರ್ದೇಶಕರಾಗಿ RBI'ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. * ಜೋಸ್ ಜೆ ಕಟ್ಟೂರ್ ಅವರು 3 ದಶಕಗಳಿಂದ ಸಂವಹನ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಸೇರ್ಪಡೆ, ಮೇಲ್ವಿಚಾರಣೆ, ಕರೆನ್ಸಿ ನಿರ್ವಹಣೆ ಮತ್ತು ಭಾರತದ ಕೇಂದ್ರ ಬ್ಯಾಂಕ್'ನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. * ಜೋಸ್ ಜೆ ಕಟ್ಟೂರ್ ಅವರು ಕಾರ್ಯಕಾರಿ ನಿರ್ದೇಶಕರಾಗಿ, ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ, ಕಾರ್ಪೊರೇಟ್ ಕಾರ್ಯತಂತ್ರ ಮತ್ತು ಬಜೆಟ್ ಇಲಾಖೆ ಮತ್ತು ರಾಜಭಾಷಾ ಇಲಾಖೆಯ ಮೇಲ್ವಿಚಾರಣೆ ಅಥವಾ ನೋಡಿಕೊಳ್ಳಲಿದ್ದಾರೆ ಎಂದು RBI ತಿಳಿಸಿದೆ.