Job Description: * ಅಸ್ಸಾಂ ರಾಜ್ಯದ 15ನೇ ಮುಖ್ಯಂತ್ರಿಯಾಗಿ 'ಹಿಮಂತ್ ಬಿಸ್ವಾಸ್ ಶರ್ಮಾ' ಪ್ರಮಾಣ ವಚನ ಸ್ವೀಕಾರ ಮಾಡಿದರು, 2021ರ ಏಪ್ರಿಲ್'ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟ ಬಹುಮತ ಪಡೆಯುವ ಮೂಲಕ ಅಧಿಕಾರ ಪಡೆದಿದ್ದಾರೆ. * ಅಸ್ಸಾಂ ರಾಜ್ಯಪಾಲ ಪ್ರೊ.ಜಗದೀಶ್ ಮುಖಿ ಅವರು ಗುಹಾತಿಯ ಶಂಕರದೇವ ಅಂತರಾಷ್ಟ್ರೀಯ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. * ಈ ಮೊದಲು ಬಿಜೆಪಿಯ ಸರ್ಬಾನಂದ ಸೋನಾವಾಲ್ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.