Job Description: * ಅಮೇರಿಕದ ಅತಿ ದೊಡ್ಡ ಇಂಧನ ಪೈಪ್ಲೈನ್ ವ್ಯವಸ್ಥೆಯು ಮೇಲೆ ಸೈಬರ್ ದಾಳಿ ಆಗಿದೆ ಮತ್ತು ಇಂಧನ ವ್ಯವಸ್ಥೆಯು ಕುಸಿದಿರುವ ಕಾರಣದಿಂದಾಗಿ ಅಮೆರಿಕ ಸರ್ಕಾರವು ಪ್ರಾದೇಶಿಕ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. * ಅಮೇರಿಕದ ಇಂಧನ ಪೈಪ್ಲೈನ್ ವ್ಯವಸ್ಥೆಯು ಮೇಲೆ ಸೈಬರ್ ದಾಳಿ ಆಗಿರುವದನ್ನು ಎರಡು ದಿನಗಳ ಹಿಂದೆ ಅಷ್ಟೇ ಪತ್ತೆಮಾಡಲಾಗಿದೆ. * ಟೆಕ್ಸಾಸ್ ಕೊಲ್ಲಿಕರಾವಳಿಯಿಂದ ಪೆಟ್ರೋಲ್ ಮತ್ತು ವಿಮಾನ ಇಂಧನವನ್ನು 8,850 ಕೀ.ಮೀ. ಪೈಪ್ಲೈನ್ ಮೂಲಕ ಪೂರ್ವ ಕರಾವಳಿಗೆ ಸಾಗಿಸಲಾಗುತ್ತಿತ್ತು, ಸರಿ ಸುಮಾರು 5 ಕೋಟಿ ಜನರು ಇದರ ಸದುಪಯೋಗ ಪಡೆಯುತ್ತಿದ್ದರು ಎಂದು ಕೊಲೋನಿಯಲ್ ಪೈಪ್ಲೈನ್ ಕಂಪೆನಿಯು ತಿಳಿಸಿದೆ. * ಕೊಲೋನಿಯಲ್ ಪೈಪ್ಲೈನ್ ಕಂಪೆನಿಯು ತನ್ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ರ್ಯಾನ್ಸಮ್ವೇರ್ ಎಂಬ ಸಾಫ್ಟ್ವೇರ್'ನ ಮೂಲಕ ದಾಳಿ ಮಾಡಲಾಗಿದೆ ಎಂದು ತಿಳಿಸಿದೆ. * ಪೈಪ್ಲೈನ್ ಕಂಪೆನಿಯು ಮೇಲೆ ದಾಳಿ ಆಗಿರುವದರಿಂದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ತುರ್ತು ಸಾಗಣೆಗೆ ಪರ್ಯಾಯ ವಿಧಾನವನ್ನು ಕೈಗೊಳ್ಳಲಾಗುವದು ಎಂದು ತಿಳಿಸಿದೆ, ಮತ್ತು ಅಗತ್ಯವಿರುವ ಪರಿಹಾರವನ್ನು ನೀಡುತ್ತೇವೆ ಎಂದು ಸಾರಿಗೆ ಇಲಾಖೆಯು ಮಾಹಿತಿಯನ್ನು ನೀಡಿದೆ.