Job Description: * ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡುವುದಾಗಿ ಭರವಸೆ ನೀಡಿದ್ದರು ಇದೀಗ ಮೇ ತಿಂಗಳಿನ ಆರಂಭದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬರಲಿವೆ ಎಂದು ತಿಳಿಸಿದ್ದಾರೆ. * ರಷ್ಯಾದ ಭಾರತೀಯ ರಾಯಭಾರಿಯಾಗಿರುವ ಬಾಲ ವೆಂಕಟೇಶ್ ವರ್ಮಾ ಮೇ ತಿಂಗಳಿನ ಆರಂಭದಲ್ಲಿ 150,000 ರಿಂದ 200,000 ಸ್ಪುಟ್ನಕ್ ವಿ ಲಸಿಕೆಗಳು ಭಾರತಕ್ಕೆ ತಲುಪುವ ಸಾಧ್ಯತೆ ಎಂದು ಮಾಹಿತಿಯನ್ನು ನೀಡಿದ್ದಾರೆ. * ರಷ್ಯಾದಿಂದ ಇದೆ ರೀತಿ ಮುಂದೆ ಜೂನ್ ತಿಂಗಳಿನಲ್ಲಿ 5 ಮಿಲಿಯನ್ ರಿಂದ 10 ಮಿಲಿಯನ್ ಸ್ಪುಟ್ನಿಕ್ ಲಸಿಕೆಗಳು ಭಾರತಕ್ಕೆ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ. * ರಷ್ಯಾದ ನೇರ ಹೂಡಿಕೆ ನಿಧಿಯು, 5 ಭಾರತೀಯ ಕಂಪನಿಗಳೊಂದಿಗೆ ಲಸಿಕೆ ಉತ್ಪಾದಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು ಮೇ'ನಲ್ಲಿ ಲಸಿಕೆ ಉತ್ಪಾದನೆ ಆರಂಭವಾಗುತ್ತದೆ. * ಭಾರತದಲ್ಲಿ ಶೇಕಡಾ 60 ರಿಂದ 70 ಕ್ಕಿಂತ ಹೆಚ್ಚಿನ ಪ್ರಮಾಣದ ಸ್ಪುಟ್ನಿಕ್-ವಿ ಲಸಿಕೆಗಳನ್ನೂ ಮುಂಬರುವ ತಿಂಗಳಿನಲ್ಲಿ ಉತ್ಪಾದನೆ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. * ರಷ್ಯಾ ದೇಶವು ಕೋವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ಭಾರತಕ್ಕೆ ಆಮ್ಲಜನಕ ಉತ್ಪಾದನಾ ಘಟಕಗಳು, ವೆಂಟಿಲೇಟರ್ಗಳು, ಮೆಡಿಕಲ್ ಮಾನಿಟರ್ಗಳು ಮತ್ತು ಔಷಧಿಗಳನ್ನು ನೆರವು ನೀಡಿದೆ.