Job Description: * ಭಾರತದಲ್ಲಿ ಕೋರೋಣ ವೈರಸ್ಸ್ 2ನೇ ವ್ಯಾಪಕವಾಗಿ ಹರಡುತ್ತಿರುವದನ್ನು ಮನಗಂಡ ಆಸ್ಪತ್ತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡಲು ಭಾರತೀಯ ನೌಕಾಪಡೆಯು ಆಪರೇಷನ್ ಸಮುದ್ರ ಸೇತು-2 ಆರಂಭಿಸಿದೆ. * ಭಾರತೀಯ ನೌಕಾ ಯುದ್ಧನೌಕೆಗಳು ದ್ರವ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಟ್ಯಾಂಕರ್ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಸಾಗಿಸಲು ಭಾರತೀಯ ನೌಕಾಪಡೆಯ ಸಿದ್ಧವಾಗಿದೆ ಎಂದು ತಿಳಿಸಿದೆ. * ಪ್ರಸ್ತುತ 40 ಮೆಟ್ರಿಕ್ ಟನ್(MT) ದ್ರವ ಆಮ್ಲಜನಕವನ್ನು ಮುಂಬೈಗೆ ಸಾಗಿಸಲು ಐಎನ್ಎಸ್ ಕೋಲ್ಕತಾ ಹಾಗೂ ಐಎನ್ಎಸ್ ಟಾಲ್ವಾರ್ ಎಂಬ ಎರಡು ಹಡಗುಗಳು ಬಹ್ರೇನ್ನ ಮನಮಾ ಬಂದರಿನಿಂದ ಹೊರಡಲು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ. * ಭಾರತೀಯ ನೌಕಾಪಡೆ ವಂದೇ ಭಾರತ್ ಮಿಷನ್ನ ಅಂಗವಾಗಿ ಈ ಹಿಂದಿನ ವರ್ಷ ಆಪರೇಷನ್ ಸಮುದ್ರ ಸೇತು ಆರಂಭಿಸಿತ್ತು. * ಪ್ರಸ್ತುತ ಅಹಮದಾಬಾದ್'ನಲ್ಲಿ ಕೋವಿಡ್'ನ ಪರಿಣಾಮ ಎದುರಿಸಲು ಸಶಸ್ತ್ರ ಪಡೆಗಳಿಂದ ಸಹಾಯಕ್ಕಾಗಿ 4 ವೈದ್ಯರು, 7 ದಾದಿಯರು, 26 ಅರೆವೈದ್ಯರು ಮತ್ತು 20 ಸಹಾಯಕ ಸಿಬ್ಬಂದಿಗಳನ್ನು ಹಾಗೂ 57 ಸದಸ್ಯರ ನೌಕಾ ವೈದ್ಯಕೀಯ ತಂಡವನ್ನು ಏಪ್ರಿಲ್ 29 ರಂದು ರೋಗಿಗಳ ಆರೈಕೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ನೌಕಾಪಡೆ ಬಗ್ಗೆ ಮಾಹಿತಿ : * ಭಾರತೀಯ ನೌಕಾಪಡೆ ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗವಾಗಿದೆ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2000 ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ ಒಟ್ಟು 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.