Job Description: * ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಗಿಲ್ಗಿಟ್-ಬಲ್ಟಿಸ್ತಾನ್ಗೆ 370 ಬಿಲಿಯನ್ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಘೋಷೆನೆ ಮಾಡಿದ್ದಾರೆ. * ಈ ಅಭಿವೃದ್ಧಿ ಪ್ಯಾಕೇಜ್'ನಿಂದಾಗಿ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ಯುವಕರಿಗೆ ಸಹಾಯ ಮಾಡಲು ಮತ್ತು ಪ್ರದೇಶವನ್ನು ಉನ್ನತ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಲು ಈ ಪ್ಯಾಕೇಜ್ ಸಹಾಯವಾಗಲಿದೆ ಎಂದು ಪಾಕ್ ಪ್ರಧಾನಿ ತಿಳಿಸಿದ್ದಾರೆ. * ಪಾಕಿಸ್ತಾನವು ತನ್ನ ಸರ್ಕಾರದ ಸಂಪುಟದ ಸಚಿವರೊಂದಿಗೆ ಗಿಲ್ಗಿಟ್ ಗೆ ಭೇಟಿ ನೀಡಿದ ಸಂಧರ್ಭದಲ್ಲಿ ಮುಂಬರುವ ಐದು ವರ್ಷಗಳಲ್ಲಿ ಗಿಲ್ಗಿಟ್-ಬಲ್ಟಿಸ್ತಾನ ಅಭಿವೃದ್ಧಿಗಾಗಿ 370 ಬಿಲಿಯನ್ ರೂ.ಗಳ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ ಎಂದು ಪಾಕ್ ಪ್ರಧಾನಿ ತಿಳಿಸಿದರು. * ಈ ಅಭಿವೃದ್ಧಿ ಪ್ಯಾಕೇಜ್'ನಿಂದಾಗಿ ಗಿಲ್ಗಿಟ್-ಬಲ್ಟಿಸ್ತಾನ್ ಪ್ರದೇಶವನ್ನು ಸ್ವಿಟ್ಜರ್ಲೆಂಡ್ನ ಮತ್ತು ಯುರೋಪಿಯನ್ ದೇಶಕ್ಕಿಂತ ಸುಂದರದ ಪ್ರವಾಸೋದ್ಯಮ ತಾಣವಾಗಿ ಮಾರ್ಪಡಿಸಲಾಗುವದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.