Job Description: * ಸಿಸಿಐ (Competition Commission of India) ಆನ್ ಲೈನ್ ಪ್ಲಾಟ್ ಫಾರ್ಮ್ ಬಿಗ್ ಬಾಸ್ಕೆಟ್'ನ್ನು ಇದೀಗ ಟಾಟಾ ಡಿಜಿಟಲ್'ಗೆ ಸ್ವಾಧೀನಪಡಿಸಿಕೊಳ್ಳಲು ಅನುಮೋದನೆಯನ್ನು ನೀಡಿದೆ. * CCI ನೀಡಿರುವ ಅನುಮೋದನೆಯಿಂದ ಟಾಟಾ ಡಿಜಿಟಲ್ ಲಿಮಿಟೆಡ್ ಶೇಕಡಾ 64.3ರಷ್ಟು ಬಿಗ್ ಬಾಸ್ಕೆಟ್ ಪಾಲನ್ನು ಪಡೆಯಲಿದೆ. * ಬೆಂಗಳೂರಿನ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯಾಗಿರುವ ಬಿಗ್ ಬಾಸ್ಕೆಟ್'ನೊಂದಿಗೆ ಟಾಟಾ ಡಿಜಿಟಲ್ ಈ ಒಪ್ಪಂದಕ್ಕೆ ಸಹಿ ಹಾಕಿದೆ, ಇದರಿಂದ ಸರಿ ಸುಮಾರು 1.2 ಬಿಲಿಯನ್ ಡಾಲರ್ ಹೂಡಿಕೆಯನ್ನು ಟಾಟಾ ಡಿಜಿಟಲ್ ಮಾಡಿದೆ. * ಆನ್ ಲೈನ್ ಮೂಲಕ ದಿನಸಿ ವಸ್ತುಗಳ ಪೂರೈಕೆ ಮಾಡುವ ಬಿಗ್ ಬಾಸ್ಕೆಟ್ ಸುಮಾರು 1.85 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ, ಇದು ಹರಿ ಮೆನನ್ ನೇತೃತ್ವದ ಬೆಂಗಳೂರು ಕಂಪನಿಯು ಯುನಿಕಾರ್ನ್ ಕ್ಲಬ್'ಗೆ ಪ್ರವೇಶಿಸಿದ ಸುಮಾರು 20 ತಿಂಗಳ ನಂತರ ಟಾಟಾ ಡಿಜಿಟಲ್'ನೊಂದಿಗೆ ಈ ಒಪ್ಪಂದಕ್ಕೆ ಸಿದ್ಧವಾಗಿದೆ.