Job Description: * ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣದಿಂದಾಗಿ ಇದೀಗ ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗಿದೆ, ಇದರಿಂದ ರೈತರಿಗೆ ಕೃಷಿ ಚುಟುವಟಿಕೆಗಳಿಗೆ ತೊಂದರೆ ಉಂಟಾಗಬಾರದೆಂದು ಕೃಷಿ ಇಲಾಖೆ ಅಗ್ರಿವಾರ್ ರೂಂ ಆರಂಭಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. * ರಾಜ್ಯ ಕೃಷಿ ಇಲಾಖೆ ಬೆಂಗಳೂರಿನಲ್ಲಿ ಅಗ್ರಿವಾರ್ ರೂಂ (ಕೃಷಿ ಯುದ್ಧ ಕೊಠಡಿ) ಯನ್ನು ಆರಂಭಿಸಿದೆ, ಇದರಿಂದ ರೈತರು ಮತ್ತು ಇತರ ದಲ್ಲಾಳಿಗಳ ಸಮಸ್ಯೆಗಳು ಮತ್ತು ದೂರುಗಳು ಮತ್ತು ಕೃಷಿ ಉಪಕರಣಗಳನ್ನು ಪಡೆಯುವಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀನಿವಾಸ್'ರವರು ತಿಳಿಸಿದ್ದಾರೆ. * ರೈತರ ಅಗ್ರಿವಾರ್ ರೂಂ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ, ರೈತರು ಈ ಸಹಾಯವಾಣಿಗಳಿಗೆ 080-22210237 ಹಾಗೂ 080-22212818 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ