Job Description: * ಜನಾರ್ದನ್ ಸಿಂಗ್ ಗೆಹ್ಲೋಟ್ ಅವರು ಭಾರತೀಯ ಒಲಿಂಪಿಕ್ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು, ಇವರು 2021ರ ಏಪ್ರಿಲ್ 28ರಂದು ನಿಧನರಾದರು. * ಜನಾರ್ದನ್ ಸಿಂಗ್ ಗೆಹ್ಲೋಟ್ ಅವರು ಭಾರತೀಯ ಕ್ರೀಡಾ ನಿರ್ವಾಹಕರಾಗಿದ್ದರು, ಮತ್ತು ಇವರು ಅಂತರರಾಷ್ಟ್ರೀಯ ಕಬಡ್ಡಿ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾಗಿದ್ದರು. * ಇವರು 28 ವರ್ಷಗಳ ಕಾಲ ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (AKFI) ಅಧ್ಯಕ್ಷರಾಗಿದ್ದರು, ಇವರನ್ನು AKFI ಜೀವನ ಅಧ್ಯಕ್ಷರನ್ನಾಗಿ ಮೇ 2013 ರಲ್ಲಿ ನೇಮಕ ಮಾಡಿದೆ. * ಜನಾರ್ದನ್ ಸಿಂಗ್ ಗೆಹ್ಲೋಟ್ ಅವರು ಬಿಜೆಪಿ ಪಕ್ಷಕ್ಕೆ ಸೇರುವ ಮೊದಲು ಅಂದರೆ 2008ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು. * ಜನಾರ್ದನ್ ಸಿಂಗ್ ಗೆಹ್ಲೋಟ್'ಅವರಿಗೆ ಬಿಗ್ ಸ್ಟಾರ್ ಹೆಚ್ಚು ಮನರಂಜಿಸುವ ಕ್ರೀಡಾಪಟು ಎಂಬ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಒಲಿಂಪಿಕ್ ಸಂಸ್ಥೆಯ ಬಗ್ಗೆ ಮಾಹಿತಿ : * ಒಲಿಂಪಿಕ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟಗಳು ಮತ್ತು ಇತರ ಅಂತರರಾಷ್ಟ್ರೀಯ ಅಥ್ಲೆಟಿಕ್ ಸಭೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಕ್ರೀಡಾಪಟುಗಳನ್ನು ಆಯ್ಕೆಮಾಡುವ ಮತ್ತು ಈ ಸ್ಪರ್ಧೆಗಳಲ್ಲಿ ಭಾರತೀಯ ತಂಡಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಭಾರತೀಯ ಒಲಿಂಪಿಕ್ ಸಂಘ ಹೊಂದಿದೆ. * ಸ್ಥಾಪನೆ: 1927 * ಅಧ್ಯಕ್ಷ: ನರಿಂದರ್ ಬಾತ್ರಾ * ಪ್ರಧಾನ ಕಾರ್ಯದರ್ಶಿ: ರಾಜೀವ್ ಮೆಹ್ತಾ * ಸ್ಥಾಪಕರು: ಹ್ಯಾರಿ ಬಕ್, ಆರ್ಥರ್ ನೊಹ್ರೆನ್