Job Description: * ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಮಲೇರಿಯಾ ದಿನವನ್ನು ಪ್ರತಿ ವರ್ಷ ಏಪ್ರಿಲ್ 25ರಂದು ಆಚರಿಸಲಾಗುತ್ತದೆ ಹಾಗೂ ಈ ವರ್ಷ ವಿಶ್ವ ಮಲೇರಿಯಾ ದಿನವನ್ನು ಜೀರೋ ಮಲೇರಿಯಾ ಗುರಿ ಎಂಬ ವಿಷಯದ ಅಡಿಯಲ್ಲಿ ಆಚರಣೆ ಮಾಡಲಾಗಿದೆ. * ವಿಶ್ವ ಮಲೇರಿಯಾ ದಿನವನ್ನು ವಿಶ್ವ ಆರೋಗ್ಯ ಅಸೆಂಬ್ಲಿಯ 60ನೇ ಅಧಿವೇಶನದ ಮೂಲಕ ಸ್ಥಾಪಿಸಲಾಗಿದೆ ಈ ಮೊದಲು ಈ ದಿನವನ್ನು ಆಫ್ರಿಕನ್ ಮಲೇರಿಯಾ ದಿನ ಎಂದು ಕರೆಯುತ್ತಿದ್ದರು. * ಮಲೇರಿಯಾ ರೋಗವು ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಚ್ಚುವದರಿಂದ ಮನುಷ್ಯರಿಗೆ ಹರಡುತ್ತದೆ. * ವಿಶ್ವ ಆರೋಗ್ಯ ಸಂಸ್ಥೆಯು ಅಧಿಕೃತ 11 ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಆಚರಣೆ ಮಾಡುತ್ತದೆ, ಅವುಗಳು ವಿಶ್ವ ಮಲೇರಿಯಾ ದಿನ, ವಿಶ್ವ ಏಡ್ಸ್ ದಿನ, ವಿಶ್ವ ಹೆಪಟೈಟಿಸ್ ದಿನ, ವಿಶ್ವ ತಂಬಾಕು ರಹಿತ ದಿನ, ವಿಶ್ವ ಚಾಗಸ್ ರೋಗ ದಿನ, ವಿಶ್ವ ಕ್ಷಯರೋಗ ದಿನ, ವಿಶ್ವ ರೋಗಿಗಳ ಸುರಕ್ಷತಾ ದಿನ, ವಿಶ್ವ ರಕ್ತದಾನಿಗಳ ದಿನ, ವಿಶ್ವ ಆರೋಗ್ಯ ದಿನ, ಹಾಗೂ ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ವಾರ ಎಂಬ ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಆಚರಿಸುತ್ತದೆ. ಮಲೇರಿಯಾ ನಿರ್ಮೂಲನೆಗೆ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ : * 2020ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿರುವ ಪ್ರಕಾರ 116 ಭಾರತೀಯ ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ.