Job Description: * ಫ್ರಾನ್ಸ್ ವಿಶ್ವದ ಅತಿ ದೊಡ್ಡ ಪರಮಾಣು ಘಟಕವನ್ನು ಭಾರತದಲ್ಲಿ ನಿರ್ಮಿಸಲಿದೆ ಎಂದು ಫ್ರಾನ್ಸ್'ನ ವಿದ್ಯುತ್ ಸಮೂಹ ಸಂಸ್ಥೆ ಇಡಿಎಫ್ ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಭಾರತದಲ್ಲಿ ಇಡಿಎಫ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಪರಮಾಣು ಘಟಕವು ಸರಿ ಸುಮಾರು 10GW ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಈ ಸಂಸ್ಥೆ ತಿಳಿಸಿದೆ. * ವಿಶ್ವದ ಅತಿ ದೊಡ್ಡ ಪರಮಾಣು ಘಟಕದ ಯೋಜನೆಯು ಭಾರತದ ಮಹಾರಾಷ್ಟ್ರ ರಾಜ್ಯದ ಜೈತಾಪುರದಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಲಾಗಿದೆ. * ಈ ಪರಮಾಣು ಘಟಕದ ನಿರ್ಮಾಣದ ಕಾರ್ಯ ಪೂರ್ಣಗೊಳ್ಳುಲು15 ವರ್ಷಗಳ ಕಾಲ ಬೇಕಾಗುತ್ತದೆ. * ಪ್ರಸ್ತುತ ಪರಮಾಣು ಘಟಕದ ಯೋಜನೆ ಪೂರ್ಣಗೊಳ್ಳುವದಕ್ಕಿಂತ ಮುಂಚಿತವಾಗಿ 10 GW ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭ ಮಾಡಲಾಗುವದು ಎಂದು ತಿಳಿಸಿದೆ, ಹಾಗೂ ಈ ವಿದ್ಯುತ್'ನಿಂದ 70 ಮಿಲಿಯನ್ ಮನೆಗಳಿಗೆ ವಿದ್ಯುತ್ ಕಲ್ಪಿಸಲಾಗುವದು ಎಂದು ಸಂಸ್ಥೆ ಮಾಹಿತಿಯನ್ನು ನೀಡಿದೆ.