Job Description: * ಭಾರತದಲ್ಲಿ ಕೊರೊನಾ ವೈರಸ್'ನ 2ನೇ ಅಲೆ ಅತಿ ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ, ಐಸಿಯು, ವೆಂಟಿಲೇಟರ್ ಹೀಗೆ ಇನ್ನು ಹಲವು ವೈದ್ಯಕೀಯ ಕೊರತೆಗಳು ಉಂಟಾಗಿವೆ. * ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ಮೇರೆಗೆ ಪ್ರಸ್ತುತ ಭಾರತ ದೇಶಾದ್ಯಂತ ವೈದ್ಯಕೀಯ ಆಮ್ಲಜನಕ ಕೊರತೆ ನೀಗಿಸುವ ದೃಷ್ಟಿಯಿಂದ ಪ್ರತಿಯೊಂದು ಜಿಲ್ಲಾ ಹಂತದಲ್ಲೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ. * ಪಿಎಂ ಕೇರ್ ವತಿಯಿಂದ ಜಿಲ್ಲೆಯ ಪ್ರಮುಖ 551 ಕೇಂದ್ರಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಪಿಎಂ ಕೇರ್ಸ್ ನಿಧಿ ತಾತ್ವಿಕ ಅನುಮೋದನೆ ನೀಡಿದೆ, ಈ ಕಾರಣಕ್ಕೆ ಜನರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. * ಪ್ರಸ್ತುತ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.