Job Description: * ಭಾರತ -ಫ್ರಾನ್ಸ್ ದೇಶಗಳ ನೌಕಾ ಸೇನೆಗಳು ಮೂರು ದಿನಗಳ ಕಾಲ ಅರಬ್ಬೀ ಸಮುದ್ರದಲ್ಲಿ ಅತ್ಯಾಧುನಿಕ ನೌಕೆಗಳು, ಸಬ್ ಮರೀನ್ ನೌಕೆಗಳನ್ನು ಒಳಗೊಂಡು ಸಮರಾಭ್ಯಾಸ ನಡೆಸಲಿವೆ ಎಂದು ತಿಳಿದು ಬಂದಿದೆ. * ಈ ಸಮರಾಭ್ಯಾಸ ಭಾರತೀಯ ನೌಕಾಪಡೆಗೆ ಬೆಂಬಲ ನೀಡುವ ಹಡಗು ದೀಪಕ್, ಕಲ್ವರಿ ದರ್ಜೆಯ ಜಲಾಂತರ್ಗಾಮಿ ನೌಕೆ ಮತ್ತು ಪಿ-8ಐ ಸಾಗರ ಗಸ್ತು ವಿಮಾನಗಳನ್ನು ನಿಯೋಜಿಸಲಿದೆ ಎಂದು ತಿಳಿಸಿದ್ದಾರೆ. * ಫ್ರಾನ್ಸ್ ನೌಕಾಪಡೆಯಿಂದ ವಿಮಾನ ವಾಹಕವಾಗಿರುವ ಚಾರ್ಲ್ಸ್-ಡಿ-ಗಾಲ್ ರಫೇಲ್-ಎಂ ಯುದ್ಧ ವಿಮಾನಗಳು ಮತ್ತು E2C ಹಾಕೀ ವಿಮಾನ ಮತ್ತು ಹೆಲಿಕಾಪ್ಟರ್'ಗಳ ಕೈಮನ್ ಎಂ ಹಾಗೂ ದಾಫಿನ್ ನಿಯೋಜನೆ ಮಾಡಲಾಗುವದು ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಎರಡು ದೇಶಗಳು ಸಾಗರ ಕ್ಷೇತ್ರದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು ಮತ್ತು ಉತ್ತೇಜನ ನೀಡಲು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ನೌಕಾಪಡೆಗಳು ಸಮರಾಭ್ಯಾಸ ನಡೆಸುತ್ತಿವೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ತಿಳಿಸಿದರು.