Job Description: * ಭಾರತೀಯ ಗಡಿ ಭದ್ರತಾ(BSF)ಪಡೆಯು ಪಾಕಿಸ್ತಾನದಿಂದ ಅಕ್ರಮವಾಗಿ ಭಾರತದ ಗಡಿಯೊಳಗೆ ಬಂದಿರುವ ಪಾರಿವಾಳದ ವಿರುದ್ಧ FIR ದಾಖಲಿಸಲು ಅನುಮತಿ ಕೇಳಿದೆ, ಪಂಜಾಬ್ ಪೊಲೀಸರು ಕಾನೂನು ಅಭಿಪ್ರಾಯ ಕೋರಿದ್ದಾರೆ ಎಂದು ತಿಳಿದು ಬಂದಿದೆ. * ಈ ಪಾಕ್ ಪರಿವಾಳವು ರೊರಾವಾಲಾ ಪೋಸ್ಟ್ನಲ್ಲಿರುವ ಗಡಿಭದ್ರತಾ ಪಡೆಯ ಸೈನಿಕನ ಭುಜದ ಮೇಲೆ ಕುಳಿತುಕೊಂಡಿತು ಹಾಗೂ ಗಡಿಯುದ್ದಕ್ಕೂ ಹಾರಾಟದ ನಡೆಸಿದ್ದ ಈ ಪಾರಿವಾಳದ ಕಾಲಿಗೆ ಸಂಪರ್ಕ ಸಂಖ್ಯೆ ಹೊಂದಿದೆ ಮತ್ತು ಕಾಗದದ ತುಣಕನ್ನು ಸುತ್ತಲಾಗಿತ್ತು ಎಂದು BSF ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ. * ಈ ಪಾಕ್ ಪಾರಿವಾಳವನ್ನು ಪಂಜಾಬ್ ಪೊಲೀಸರಿಗೆ BSF ಅಧಿಕಾರಿ ಒಪ್ಪಿಸಿದ್ದಾರೆ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಲಿಖಿತ ರೊಪದಲ್ಲಿ ಕೇಳಿಕೊಂಡಿದ್ದಾರೆ. * ಗಡಿಪ್ರದೇಶಗಳಲ್ಲಿ ಗೂಢಚರ್ಯೆ ಕಾರ್ಯಗಳಿಗಾಗಿ ಪಾರಿವಾಳವನ್ನು ಬಳಸಲಾಗುತ್ತದೆ ಮತ್ತು ಇವುಗಳನ್ನು ಬಳಸಿಕೊಂಡು ಗುಪ್ತಸಂದೇಶಗಳನ್ನೂ ರವಾನಿಸಲಾಗುತ್ತದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಈ ಪರಿವಾಳವು ಖಾಂಗಾರದ ಪೊಲೀಸ್ ಠಾಣೆಯ ವಶದಲ್ಲಿದೆ ಎಂದು ತಿಳಿದು ಬಂದಿದೆ.