Job Description: * ಚೀನಾ ದೇಶವು ಅಮೇರಿಕ ವಿರುದ್ಧ ಅಣಕು ಯುದ್ಧ ನಡೆಸಿದೆ ಹಾಗೂ ಹಲವು ರೀತಿಯ ಬಾಂಬ್ಗಳ ಪ್ರಯೋಗವನ್ನು ನಡೆಸಿದೆ. * ಪೂರ್ವ ಚೀನಾದಲ್ಲಿರುವ ಕ್ವಿನ್ಘಾಯ್ ಪ್ರಾಂತ್ಯದ ವಾಯುನೆಲೆಯಿಂದ ಯುದ್ಧ ವಿಮಾನಗಳು ಪ್ರಯೋಗ ನಡೆಸಿವೆ ಎಂದು ತಿಳಿದು ಬಂದಿದೆ, ಈ ಯುದ್ಧ ವಿಮಾನಗಳ ಪ್ರಯೋಗದಲ್ಲಿ ಎಚ್-6ಕೆ ಯುದ್ಧ ವಿಮಾನಗಳು ಭಾಗಿಯಾಗಿದ್ದವು ಎಂದು ಡ್ರ್ಯಾಗನ್ನ ಸರಕಾರಿ ನ್ಯೂಸ್ ಚಾನೆಲ್'ನ CCTV ಮೂಲಕ ತಿಳಿದು ಬಂದಿದೆ. * ಅಮೆರಿಕ ಮತ್ತು ಜಪಾನ್ ದೇಶಗಳು ಜಂಟಿಯಾಗಿ ತೈವಾನ್ ದ್ವೀಪ ಸಮೂಹದ ವ್ಯಾಪ್ತಿಯಲ್ಲಿ ಶಾಂತಿಯುತ ಮತ್ತು ದ್ವೇಷಮಯ ವಾತಾವರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆಯನ್ನು ನೀಡಿದೆ ಇದರ ಬೆನ್ನಲ್ಲೇ ಯುದ್ಧ ಪ್ರಯೋಗ ನಡೆದಿದೆ ಎನ್ನಲಾಗಿದೆ. * ಇದೇ ಮೊದಲ ಬಾರಿಗೆ ಅಂದರೆ 1969ರ ನಂತರ ತೈವಾನ್ ದ್ವೀಪದ ಬಗ್ಗೆ ಎರಡೂ ದೇಶಗಳ ಜಂಟಿಯಾಗಿ ಹೇಳಿಕೆಯನ್ನು ನೀಡಿವೆ ಎಂದು ತಿಳಿಸಲಾಗಿದೆ.