Job Description: * ಫ್ರಾನ್ಸ್ - ಭಾರತ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ಮಾಡಿಕೊಂಡಿತ್ತು ಈ ಒಪ್ಪಂದದ ಪ್ರಕಾರ 5ನೇ ಬ್ಯಾಚ್ನ ರಫೇಲ್ ಯುದ್ಧ ವಿಮಾನಗಳು 8,000 ಕಿ.ಮೀ ದೂರದ ಪ್ರಯಾಣವನ್ನು ಕ್ರಮಿಸಿ ಫ್ರಾನ್ಸ್ನಿಂದ ಭಾರತಕ್ಕೆ ಬಂದಿವೆ ಎಂದು ಭಾರತೀಯ ವಾಯುಪಡೆ ಮಾಹಿತಿಯನ್ನು ನೀಡಿದೆ. * ಭಾರತೀಯ ವಾಯುಪಡೆಯು ಇಲ್ಲಿಯವರೆಗೆ ಭಾರತಕ್ಕೆ ಬಂದಿರುವ ರಫೇಲ್ ಯುದ್ಧ ವಿಮಾನಗಳ ಸಂಖ್ಯೆಯನ್ನು ತಿಳಿಸಿಲ್ಲ. * ಫ್ರಾನ್ಸ್ನಿಂದ ಭಾರತಕ್ಕೆ ಹೊರಟಿರುವ ರಫೆಲ್ ಯುದ್ಧ ವಿಮಾನಗಳಿಗೆ ವಾಯು ಮಾರ್ಗದಲ್ಲಿ ಇಂಧನ ತುಂಬುವಿಕೆ ನೆರವನ್ನು ಫ್ರಾನ್ಸ್ನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪಡೆಗಳು ನೀಡಿವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. * ಈ ಹಿಂದೆ 4ನೇ ಬ್ಯಾಚ್'ನ 3 ರಫೇಲ್ ಯುದ್ಧ ವಿಮಾನಗಳು ಏಪ್ರಿಲ್ 1ರಂದು ಭಾರತಕ್ಕೆ ಬಂದಿದ್ದವು ಎಂದು IAF ತಿಳಿಸಿದೆ.