Job Description: * ಭಾರತದ ಮೊದಲ ಮಹಿಳೆಯಾಗಿರುವ ಪಶ್ಚಿಮ ಮಹಾರಾಷ್ಟ್ರದ ಪ್ರಿಯಾಂಕ ಮೊಹಿತೆ ಅವರು ವಿಶ್ವದ 10ನೇ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಅನ್ನಪೂರ್ಣವನ್ನು ಏರಿ ದಾಖಲೆ ನಿರ್ಮಿಸಿದ್ದಾರೆ. * 2021 ಏಪ್ರಿಲ್ 16ರಂದು ಪ್ರಿಯಾಂಕ ಮೊಹಿತೆ ಅವರು ವಿಶ್ವದ 10ನೇ ಎತ್ತರದ ಶಿಖರ ಮೌಂಟ್ ಅನ್ನಪೂರ್ಣ ಪರ್ವತವನ್ನು ಏರಿದ್ದಾರೆ ಈ ಪರ್ವತವು 8091ಮೀ ಎತ್ತರದ ಮಧ್ಯಾಹ್ನ1.30ರ ವೇಳೆಗೆ ಶಿಖರದ ತುದಿ ತಲುಪಿದ್ದಾರೆ, ಎಂದು ಕಿರಣ್ ಮಜುಮ್ದಾರ್ ಶಾ ರವರು ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದ್ದಾರೆ. * ಮೌಂಟ್ ಅನ್ನಪೂರ್ಣ ಶಿಖರವು ನೇಪಾಳದಲ್ಲಿ ಇರುವ ಹಿಮಾಲಯಾ ಶ್ರೇಣಿಯ ಶಿಖರವಾಗಿದೆ. * ಈ ಹಿಂದೆ 2013ರಲ್ಲಿ ಪ್ರಿಯಾಂಕ ಮೊಹಿತೆ ಅವರು 8,849 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದರು ಮತ್ತೇ 2016ರಲ್ಲಿ 5,895 ಮೀಟರ್ ಎತ್ತರದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಏರಿದ್ದರು, 2018ರಲ್ಲಿ 8,516 ಮೀಟರ್ ಎತ್ತರದ ಮೌಂಟ್ ಲೋಟ್ಸೆ ಶಿಖರ ಹಾಗೂ 8,485 ಮೀಟರ್ ಎತ್ತರದ ಮೌಂಟ್ ಮಕಲು ಶಿಖರವನ್ನು ಏರಿ ಸಾಧನೆ ಮಾಡಿದ್ದರು. * ಪ್ರಿಯಾಂಕ ಮೊಹಿತೆ ಅವರು 2012ರಲ್ಲಿ ಅಧಿಕೃತವಾಗಿ ಪರ್ವತ ಶ್ರೇಣಿ ಏರಲು ಪ್ರಾರಂಭಿಸಿದ್ದರು ಇವರಿಗೆ 2017-18 ಸಾಲಿನ ಶಿವ ಛತ್ರಪತಿ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರ್ಕಾರವು ನೀಡಿದೆ.