Job Description: * ಇಸ್ರೇಲ್'ನ ಇಂಧನ ಸಚಿವಾಲಯವು 2015 ವರ್ಷಕ್ಕೆ ಹೋಲಿಸಿದಂತೆ 2050ರ ವೇಳೆಗೆ 80% ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ರಾಷ್ಟ್ರೀಯ ಯೋಜನೆಯನ್ನು ಪ್ರಕಟಿಸಿದೆ. * ಇಸ್ರೇಲ್ ರಾಷ್ಟ್ರವು ಕಲ್ಲಿದ್ದಲಿನಿಂದ ಉತ್ಪಾದಣೆ ಮಾಡುವ ವಿದ್ಯುತ್ ಸ್ಥಾವರಗಳನ್ನು 2025ರ ವೇಳೆಗೆ ಮುಚ್ಚುವ ಯೋಜನೆ ಹೊಂದಿದೆ, ಹಾಗೂ 2050ರ ವೇಳೆಗೆ ವಿದ್ಯುತ್ ಕ್ಷೇತ್ರದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 75% ರಷ್ಟು 85% ಕ್ಕೆ ಇಳಿಸುವ ಗುರಿಯನ್ನು ಕೂಡ ಇಸ್ರೇಲ್ ಹೊಂದಿದೆ. * ದೇಶದಲ್ಲಿ ನವೀಕರಿಸಬಹುದಾದ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಪವರ್ ಗ್ರಿಡ್ ಸುಧಾರಣೆಗಳ ಮೂಲಕ ಯೋಜನೆಯನ್ನು ಕಾರ್ಯ ರೂಪಕ್ಕೆತರಲಾಗುವದು ಎಂದು ತಿಳಿಸಿದೆ. * ಇಸ್ರೇಲ್ ರಾಷ್ಟ್ರವು ತನ್ನ ಗುರಿಗಳನ್ನು ತಲುಪಲು ಸೌರ ಮತ್ತು ಹೈಡ್ರೋಜನ್ ಶಕ್ತಿಯ ಕಡೆಗೆ ಸಾಗುವುದು ಉತ್ತಮ ಎಂದು ತಿಳಿಸಿದೆ.