Job Description: * ಜೆಕ್ ಸರ್ಕಾರವು ರಷ್ಯಾದ 18 ರಾಜತಾಂತ್ರಿಕ ಅಧಿಕಾರಿಗಳನ್ನು ಗೂಢಚರ್ಯ ಆರೋಪದ ಅಡಿಯಲ್ಲಿ ಉಚ್ಛಾಟನೆ ಮಾಡಿದೆ, ಇದಕ್ಕೆ ಪ್ರತ್ಯತುತ್ತರವಾಗಿ ರಷ್ಯಾ ವಿದೇಶಾಂಗ ಸಚಿವಾಲಯವು ಜೆಕ್ ರಾಷ್ಟ್ರದ 20 ರಾಜತಾಂತ್ರಿಕ ಅಧಿಕಾರಿಗಳು ದೇಶ ಬಿಡಬೇಕು ಎಂದು ಜೆಕ್ನ ರಾಯಭಾರಿ ವಿಟೆಜ್ಸ್ಲಾವ್ ಪಿವೊಂಕಾ ಅವರಿಗೆ ಸಮನ್ಸ್ ನೀಡಿದೆ. * ಪ್ರಸ್ತುತ ಅಮೆರಿಕ ರಾಷ್ಟ್ರವು ರಷ್ಯಾ ರಾಷ್ಟ್ರದ ಮೇಲೆ ನಿರ್ಬಂಧ ಹೇರಿದೆ ಇದಕ್ಕಾಗಿ ಜೆಕ್ ಸರ್ಕಾರವು ಅಮೇರಿಕದ ಮೆಚ್ಚುಗೆಗೆ ಪಾತ್ರವಾಗಲು ಈ ಕ್ರಮವನ್ನು ಜರುಗಿಸಿದೆ ಎಂದು ರಷ್ಯಾ ಸಚಿವಾಲಯ ವರದಿ ಮಾಡಿದೆ. * ರಷ್ಯಾದ ಸೇನೆಯ 18 ರಾಜತಾಂತ್ರಿಕ ಅಧಿಕಾರಿಗಳು 2014ರ ಮದ್ದುಗುಂಡು ಡಿಪೋ ಸ್ಪೋಟದಲ್ಲಿ ಏಜೆಂಟ್ಸ್'ಗಳಾಗಿ ಸೇರಿಕೊಂಡಿದ್ದಾರೆ ಎಂದು ಜೆಕ್ ಸೇನೆಯು ಸಾಕ್ಷಿಗಳನ್ನೂ ನೀಡಿದೆ ಈ ಆಧಾರದ ಮೇಲೆ ಜೆಕ್ ಸರ್ಕಾರವು ಈ ಅಧಿಕಾರಿಗಳನ್ನು ಉಚ್ಛಾಟನೆ ಮಾಡಿದೆ ಎಂದು ಜೆಕ್ ಪ್ರಧಾನಿ ಆಂಡ್ರೆಜ್ ಬಾಬಿಸ್'ರವರು ಮಾಹಿತಿಯನ್ನು ನೀಡಿದ್ದಾರೆ.