Job Description: * ಸೆಂಟ್ರಲ್ ಬ್ಯಾಂಕ್ ಆಫ್ ಟರ್ಕಿಯು ಕ್ರಿಪ್ಟೋ ಕರೆನ್ಸಿ ಮತ್ತು ಕ್ರಿಪ್ಟೋ ಸ್ವತ್ತುಗಳನ್ನು ಬಳಸುವುದನ್ನು ನಿಷೇಧಿಸಿದೆ, ಇದರಿಂದ 4 ಶೇಕಡಾ ಕ್ಕಿಂತಲೂ ಹೆಚ್ಚು ಬಿಟ್ಕಾಯಿನ್ ಕರೆನ್ಸಿ ಕುಸಿದಿದೆ. * ಟರ್ಕಿಯ ಅಧ್ಯಕ್ಷ ಎರ್ಡೊಗನ್ ಉನ್ನತ ಕೇಂದ್ರೀಯ ಬ್ಯಾಂಕರ್ ನಾಸಿ ಅಗ್ಬಾಲ್ ಅವರನ್ನು 2021ರ ಮಾರ್ಚ'ನಲ್ಲಿ ವಜಾಗೊಳಿಸಿದರು, ಇದರಿಂದ ಟರ್ಕಿಯಲ್ಲಿನ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯ ಬೆಳವಣಿಗೆಯನ್ನು ಕಂಡಿತು ಹಾಗೂ ಬಿಟ್ ಕಾಯಿನ್ 111 ಶೇಕಡಾ ಮತ್ತು ಎರಡನೇ ಅತಿದೊಡ್ಡ ಕ್ರಿಪ್ಟೋ ಕರೆನ್ಸಿ ಎಥೆರಿಯಮ್ 225 ಶೇಕಡಾ ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. * ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿನ ಮಾರುಕಟ್ಟೆ ಚಂಚಲತೆ ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಟರ್ಕಿ ಸರ್ಕಾರವು ನಿಷೇಧಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಟರ್ಕಿ ಬಗ್ಗೆ ಮಾಹಿತಿ : * ಟರ್ಕಿ ಗಣರಾಜ್ಯದ ಸೆಂಟ್ರಲ್ ಬ್ಯಾಂಕ್, ಸಿಬಿಆರ್ಟಿ ಟರ್ಕಿಯ ಕೇಂದ್ರ ಬ್ಯಾಂಕ್ ಆಗಿದೆ. * ಇದರ ಜವಾಬ್ದಾರಿಗಳಲ್ಲಿ ವಿತ್ತೀಯ ಮತ್ತು ವಿನಿಮಯ ದರ ನೀತಿಯನ್ನು ನಡೆಸುವುದು, ಟರ್ಕಿಯ ಅಂತರರಾಷ್ಟ್ರೀಯ ಮೀಸಲುಗಳನ್ನು ನಿರ್ವಹಿಸುವುದು, ಹಾಗೆಯೇ ನೋಟುಗಳನ್ನು ಮುದ್ರಿಸುವುದು ಮತ್ತು ವಿತರಿಸುವುದು ಮತ್ತು ದೇಶದಲ್ಲಿ ಪಾವತಿ ವ್ಯವಸ್ಥೆಗಳನ್ನು ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ನಿಯಂತ್ರಿಸುವುದು.